ವಿಶ್ವ ಹಿಂದೂ ಪರಿಷತ್‍ನ ಸೌತ್ ಹಿಂದೂ ಯೂತ್ ಆಸ್ಟ್ರೇಲಿಯಾದ ಸ್ಟೂಡೆಂಟ್ ಚಾಪ್ಟರ್ ನ ಅಧ್ಯಕ್ಷರಾಗಿ ಪುತ್ತೂರಿನ ಪೂರ್ಣೇಶ್, ಉಪಾಧ್ಯಕ್ಷೆಯಾಗಿ ಬೆಳ್ತಂಗಡಿಯ ಕುಪ್ಪೆಟ್ಟಿ ನಿವಾಸಿ ಸನಿಹಾ ಆಯ್ಕೆ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಆಸ್ಟ್ರೇಲಿಯಾ ನೇತೃತ್ವದ ಹಿಂದೂ ಯೂತ್ ಆಸ್ಟ್ರೇಲಿಯಾದ, ಸೌತ್ ಆಸ್ಟ್ರೇಲಿಯಾ ಸ್ಟೂಡೆಂಟ್ ಚಾಪ್ಟರ್‍ ನ ಅಧ್ಯಕ್ಷರಾಗಿ ಪುತ್ತೂರು ಮೂಲದ ಪೂರ್ಣೇಶ್ ಹಾಗೂ ಉಪಾಧ್ಯಕ್ಷೆಯಾಗಿ ಬೆಳ್ತಂಗಡಿ ಮೂಲದ ಕುಪ್ಪೆಟ್ಟಿ ನಿವಾಸಿ ಸನಿಹಾ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಪೂರ್ಣೇಶ್ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಪೂರೈಸಿ ಬೆಂಗಳೂರಿನ ‘ಬಿಐಟಿ’ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು, ಪ್ರಸ್ತುತ ಮಾಸ್ಟರ್ ಇನ್ ಕನ್ಸ್‍ಸ್ಟ್ರಕ್ಷನ್ ಮ್ಯಾನೇಜ್‍ಮೆಂಟ್ ಡಿಗ್ರಿಯನ್ನು ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ಅಡಿಲೇಡ್ ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ನಲ್ಲಿ 3 ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ ಪೇಪರ್ ಗಳನ್ನು ಪ್ರಕಟಿಸಿದ್ದಾರೆ. ಇವರು ಸಂತೋಷ್ ಕುಮಾರ್ ಕುಂಬ್ಳೆ ಮತ್ತು ಸುಚಿತಾ ಗೌರಿ ಅವರ ಪುತ್ರರಾಗಿದ್ದಾರೆ.

ಉಪಾಧ್ಯಕ್ಷರಾಗಿ ಆಯ್ಕೆಯಾದ ಬೆಳ್ತಂಗಡಿ ಮೂಲದ ಕುಮಾರಿ ಸನಿಹಾ ಕುಪ್ಪೆಟ್ಟಿ ಅವರು ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ ಪೂರೈಸಿ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಬಳಿಕ ತುಮಕೂರಿನ ಸಿದ್ಧಗಂಗಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಆರ್ಕಿಟೆಕ್ಚರ್ ” ಕೋರ್ಸ್ ನಲ್ಲಿ ಪದವಿ ಪಡೆದು ಮಾಸ್ಟರ್ಸ್ ಇನ್ ಆರ್ಕಿಟೆಕ್ಚರ್ ಕನಸ್ಟ್ರಕ್ಷನ್ ಮ್ಯಾನೇಜ್‍ಮೆಂಟ್ ಡಿಗ್ರಿಯನ್ನು ಆಸ್ಟ್ರೇಲಿಯಾದ ಯೂನಿವರ್ಸಿಟಿ ಆಫ್ ಅಡಿಲೇಡ್‍ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು 500 ಕ್ಕೂ ಅಧಿಕ ಬಹುಮಾನ, ಪ್ರಶಸ್ತಿ, ಗೌರವಗಳನ್ನು ಪಡೆದಿದ್ದಾರೆ. ಪ್ರಸ್ತುತ ತನ್ನ ಉನ್ನತ ವಿದ್ಯಾಭ್ಯಾಸ ದ ಜೊತೆಗೆ ಆಸ್ಟ್ರೇಲಿಯಾದ ಹಲವಾರು ಸಂಘ ಸಂಸ್ಥೆಗಳ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಸನಿಹಾ ಅವರು ರಾಜೇಂದ್ರ ಕುಪ್ಪೆಟ್ಟಿ ಮತ್ತು ರೇಖಾ ರಾಜೇಂದ್ರ ಕುಪ್ಪೆಟ್ಟಿ ಅವರ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.