HomePage_Banner_
HomePage_Banner_

ನೆರಿಯ ಗ್ರಾ.ಪಂ: ಶಾಸಕ ಹರೀಶ್ ಪೂಂಜರಿಂದ 250 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ

ನೆರಿಯ: ಕೋವಿಡ್-19 ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟಗೊಂಡ ಬಡ ಜನರಿಗೆ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಪೆಟ್ರೋನೆಟ್ ಕಂಪನಿ ಹಾಗೂ ಎಚ್‍ಪಿಸಿಎಲ್, ಐಪಿಸಿಎಲ್ ಕಂಪನಿಗಳು ಹಾಗೂ ದಾನಿಗಳ ಸಹಕಾರದಿಂದ 250 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.

ಇದೇ ವೇಳೆಯಲ್ಲಿ ನೆರಿಯ ಗ್ರಾಮ ಪಂಚಾಯತ್‍ನ ಸಭಾಭವನದಲ್ಲಿ ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೂ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ಶಾಸಕ ಹರೀಶ್ ಪೂಂಜ ನೀಡಿದರು.

ಈ ಸಂದರ್ಭದಲ್ಲಿ ಪೆಟ್ರೋನೆಟ್ ಪಿಲಿಕಳ ಮ್ಯಾನೇಜರ್ ಪ್ರವೀಣ್ ಕುಮಾರ್, ಗ್ರಾಪಂ ಅಧ್ಯಕ್ಷ ಪಿ.ಮಹಮ್ಮದ್, ಪೆಟ್ರೋನೆಟ್ ಇಂಜಿನಿಯರ್‍ಗಳಾದ ಕಿರಣ್ ಕುಮಾರ್, ಶೀತಲ್ ಕುಮಾರ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.