ಬೆಳ್ತಂಗಡಿ: ಕೋವಿಡ್-19 ಕೊರೊನಾ ರೋಗವು ವ್ಯಾಪಕವಾಗುತ್ತಿದ್ದು ತಾಲೂಕಿಗೂ ಕೂಡ ಇದರ ಕಬಂದ ಬಾಹು ವಿಸ್ತರಣೆ ಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮದಭಾಗವಾಗಿ ಬ್ಯೂಟಿ ಪಾರ್ಲರ್ ಗಳ ಸೇವೆಯನ್ನು ವಾರಗಳ ಕಾಲ ಸ್ಥಗಿತಗೊಳಿಸಲು ಸ್ವಯಂ ತೀರ್ಮಾನಕ್ಕೆ ಬಂದಿದ್ದೇವೆ ಎಂದು ತಾ. ಬ್ಯೂಟಿಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಪಲ್ಲವಿರಾಜು, ಕಾರ್ಯದರ್ಶಿ ಶಾಂತಾ ಬಂಗೇರ ತಿಳಿಸಿದ್ದಾರೆ.
ಶಿರ್ಲಾಲು ಮತ್ತು ವೇಣೂರು ಕೊರೊನಾ ಪಾಸಿಟಿವ್ ರೋಗಿಯ ಟ್ರಾವೆಲಿಂಗ್ ಹಿಸ್ಟ್ರಿ ಬೆಳ್ತಂಗಡಿ ಪರಿಸರದಲ್ಲಿ ಅತೀವ ಭಯದ ವಾತಾವರಣಕ್ಕೆ ಕಾರಣವಾಗಿದೆ. ಅವರು ನಗರದಲ್ಲಿ ವಾಹನದಲ್ಲಿ ಪ್ರಯಾಣಿಸಿದ್ದೂ ತಿಳಿದು ಬಂದಿದ್ದು, ಇದರಿಂದ ಇತರರಲ್ಲೂ ರೋಗ ಲಕ್ಷಣ ಕಾಣಿಸಿಕೊಳ್ಳುವ ಆತಂಕವಿದೆ.
ನಮ್ಮ ಉದ್ಯಮದಲ್ಲಿ ಗ್ರಾಹಕರ ಸಮೀಪದಿಂದ ಕೈಗೊಳ್ಳುವ ವೃತ್ತಿಯಾಗಿದ್ದು ಅಪಾಯ ಸಂಭವ ಅಧಿಕವಿದೆ. ಆ ಹಿನ್ನೆಲೆಯಲ್ಲಿ ಅಸೋಸಿಯೇಷನ್ ಸದಸ್ಯರ ಹಾಗೂ ಸಮಾಜದ ಹಿತದೃಷ್ಟಿಯಿಂದ ವಾರದಮಟ್ಟಿಗೆ ಎಲ್ಲ ಪಾರ್ಲರ್ ಗಳನ್ನು ಮುಚ್ಚಲು ತೀರ್ಮಾನಿಸಿದ್ದೇವೆ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.