ಬಂದಾರು; ಗ್ರಾಮದ ಬಟ್ಲಡ್ಕ ಜಮಾಅತ್ ಕಾರ್ಯದರ್ಶಿ ಹಾಗೂ ಬಟ್ಲಡ್ಕ ಎಸ್ ವೈ ಎಸ್ ಶಾಖೆಯ ಕಾರ್ಯದರ್ಶಿಯೂ ಆದ ಮುಹಮ್ಮದ್ ಬಂದಾರು ಅವರು ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದ ಬಟ್ಲಡ್ಕ ಜಮಾಅತ್ ವ್ಯಾಪ್ತಿಯಲ್ಲಿ ಇರುವ ಮನೆಗಳಿಗೆ ಸಂಘ-ಸಂಸ್ಥೆಗಳ ಹಾಗೂ ದಾನಿಗಳಿಂದ ಪಡೆಡ ಸುಮಾರು 6 ಸಾವಿರಕ್ಕಿಂಲೂ ಹೆಚ್ಚು ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸಿದ ಕಾರಣಕ್ಕಾಗಿ ಅವರನ್ನು ಜಮಾಅತ್ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಜಮಾಅತ್ ಖತೀಬ್ ಅಬೂಬಕ್ಕರ್ ಸಖಾಫಿ ಬೇಂಗಿಲ, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಬಟ್ಲಡ್ಕ, ಎಸ್ ವೈ ಎಸ್ ಬಟ್ಲಡ್ಕ ಶಾಖೆ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಜಮಾಅತ್ ಕಮಿಟಿ ಉಪಾಧ್ಯಕ್ಷ ಹಬೀಬ್ ರೆಹಮಾನ್, ಕೋಶಾಧಿಕಾರಿ, ಇಸುಬು ಹಾಗೂ ಎಸ್ ವೈ ಎಸ್ ಬಟ್ಲಡ್ಕ ಇದರ ಸದಸ್ಯ ಫಾರೂಕ್ ಮದನಿ, ಇಬ್ರಾಹಿಂ ಝುಹುರಿ, ಪೇರಲ್ತಪಲಿಕೆ ,ನೌಫಲ್, ಸಿದ್ದೀಕ್, ಸಲೀಂ ಮಸೀದಿ ಬಳಿ, ಫಯಾಜ್,ಸ್ವಾಲಿಹ್, ಅಬ್ದುಲ್ ಸಮದ್, ಮುಸ್ತಫಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.