ಬೆಳ್ತಂಗಡಿ: ಸಮೂಹ ಪ್ರತಿಭಾ ಪ್ರದರ್ಶನ ಲಾಕ್ ಡೌನ್ ನಡುವೆಯೇ ವಿಶ್ವದಾಖಲೆ ತಾಲೂಕಿನ ಯುವಕರ ತಂಡ ವಿಶ್ವದಾಖಲೆಯ ಕನಸು ಕಂಡು ನನಸಾಗಿಸಿದ್ದಾರೆ.
ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸಂಸ್ಥೆಯು ಸಮೂಹ ಪ್ರತಿಭಾ ಪ್ರದರ್ಶನ ಎಂಬ ಕಾರ್ಯಕ್ರಮಕ್ಕೆ ವಿಶ್ವದಾಖಲೆಯ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.
ಇದು 2000 ಮಕ್ಕಳು ಏಕ ಕಾಲದಲ್ಲಿ ಅವರವರ ಮನೆಯಲ್ಲಿಯೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿದೆ. ಬೋಧಿ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲ್ ಮೂಲಕ
ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಂಡದಲ್ಲಿ ಸ್ಮಿತೇಶ್ ಎಸ್, ಅನೀಶ್, ಅನನ್ಯ, ತೇಜಸ್ವಿನಿ, ದೀಕ್ಚಿತ್ ಕೆ, ಅಕ್ಷಯ್, ದೀಕ್ಷಿತ್ ಭಂಡಾರಿ, ಹೇಮಂತ್, ಕಿಶೋರ್, ಚಂದ್ರಹಾಸ್, ತುಷಾರ್ ಗೌಡ ಸಂಯೋಜಕರಾಗಿದ್ದರು.