ಮಹಾಮಾರಿ ಕೊರೊನಾ ಸೋಂಕಿಗೆ ಬೆಳ್ತಂಗಡಿಯಲ್ಲಿ ಮೊದಲ ಬಲಿ ಮೃತಪಟ್ಟ ವೇಣೂರು ಪರಿಸರದ ವ್ಯಕ್ತಿಗೆ ಕೋವಿಡ್ ಸೋಂಕು ದೃಢ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಚಾಲಕರಾಗಿ ದುಡಿಯುತ್ತಿದ್ದ ವೇಣೂರಿನ ಶ್ರೀರಾಮನಗರ ನಿವಾಸಿ ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದೀಗ ಕೊರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ವೇಣೂರು ಮುಖ್ಯಪೇಟೆಯನ್ನು ಸೀಲ್‌ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದರು. ಈ ವೇಳೆ ಅವರ ಗಂಟಲು ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಬರದೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ವರದಿ ಬರುವವರೆಗೆ ಕಾಯಲಾಗಿತ್ತು. ಸೋಮವಾರ ಬೆಳಿಗ್ಗೆ ವರದಿ ಜಿಲ್ಲಾಡಳಿತದ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ವೇಣೂರಿನ ಅಂಗಡಿಯ ಟೆಂಪೋ ಚಾಲಕರಾಗಿದ್ದ ಇವರು ಅಂಗಡಿಗೆ ಮಂಗಳೂರು ಬಂದರು ಹಾಗೂ ವಿವಿಧ ಕಡೆಗಳಿಂದ ಸಾಮಾನುಗಳನ್ನು ತರುತ್ತಿದ್ದರು. ಇತರ ಸಮಯದಲ್ಲಿ ತನ್ನ ಸ್ವಂತ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಶನಿವಾರ ಏಕಾಏಕಿ ತೀವ್ರ ಅಸ್ವಸ್ಥಗೊಂಡ ಇವರನ್ನು ಮಂಗಳೂರಿಗೆ ಸಾಗಿಸಲಾಗಿತ್ತು.

ಮೃತರ ಪತ್ನಿ ಹಾಗೂ ಮಗಳನ್ನು, ಮೃತರು ದುಡಿಯುತ್ತಿದ್ದ ಅಂಗಡಿ ಮಾಲಕರ ಅಂಗಡಿ-ಮನೆಯನ್ನು ಹಾಗೂ ಆಸ್ಪತ್ರೆಗೆ ಸಾಗಿಸಿದ ಬೊಲೆರೊ ವಾಹನ ಚಾಲಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಮಧ್ಯೆ ಪುತ್ರಿಯನ್ನು ರವಿವಾರ ಬಜಿರೆ ಗ್ರಾಮವೊಂದರ ಮನೆಯೊಂದರಲ್ಲಿ ಕುಳ್ಳಿರಿಸಿದ್ದು, ಆ ಮನೆಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬೆಳ್ತಂಗಡಿ ತಹಶೀಲ್ದಾರ ಗಣಪತಿ ಶಾಸ್ತ್ರಿ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಮನೆಮಂದಿಯನ್ನು ಹಾಗೂ ಅಂಗಡಿ ಮಾಲಕರನ್ನು ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದಾರೆ. ಮೃತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.