HomePage_Banner_
HomePage_Banner_
HomePage_Banner_

ಸೋನಿಯ ಗಾಂಧಿಯವರ ಮೇಲೆ ಹಾಕಿದ ಕೇಸನ್ನು ತಕ್ಷಣ ಹಿಂತೆಗೆಯುವಂತೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಗ್ರಹ

Advt_NewsUnder_1

ಬೆಳ್ತಂಗಡಿ: ಕೇಂದ್ರ ಸರಕಾರದ ಆರ್ಥಿಕ ಪ್ಯಾಕೇಜ್‍ನ್ನು ಟೀಕಿಸಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯ ಗಾಂಧಿಯವರ ಮೇಲೆ ಕೇಸು ಹಾಕಿರುವುದನ್ನು ಕಾಂಗ್ರೆಸ್ ಜಿಲ್ಲಾ ಸಮಿತಿ ಖಂಡಿಸುತ್ತದೆ. ಕೂಡಲೇ ಸರಕಾರ ಅವರ ಮೇಲೆ ಹಾಕಿದ ಕೇಸನ್ನು ಹಿಂತೆಗೆಯಬೇಕು ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

ಅವರು ಮೇ.23ರಂದು ಬೆಳ್ತಂಗಡಿ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸೋನಿಯ ಗಾಂಧಿಯವರು 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮತ್ತೆ ಒಂದು ವರ್ಷದಿಂದ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಸರಕಾರದ ವೈಫಲ್ಯವನ್ನು ಎತ್ತಿತೋರಿಸುವಂತದ್ದು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದವರ ಕೆಲಸ ಅದನ್ನು ಸೋನಿಯ ಗಾಂಧಿಯವರು ಮಾಡಿದ್ದಾರೆ. ಅದಕ್ಕಾಗಿ ಅವರ ಮೇಲೆ ಕೇಸು ದಾಖಲಿಸುವುದು ಕೆಟ್ಟ ಸಂಪ್ರಾದಾಯಕ್ಕೆ ಕೇಂದ್ರ ಸರಕಾರ ನಾಂದಿ ಹಾಡಿದಂತಾಗಿದೆ ಎಂದು ಅಪಾದಿಸಿದ್ದಾರೆ.

ಇದನ್ನೇ ಪ್ರಶ್ನೆ ಮಾಡಿದ್ದಕ್ಕೆ ಕೇಸು ದಾಖಲಿಸುವುದಾದರೆ, ಇವತ್ತು ಬಿಜೆಪಿಯ ನಾಯಕರುಗಳು, ಸಚಿವರಗಳು ಆಡುವ ಮಾತುಗಳು ಒಬ್ಬೋಬ್ಬರ ಮೇಲೆ ಸಾವಿರ ಕೇಸು ಹಾಕಬಹುದು. ಸಚಿವ ಮಾಧುಸ್ವಾಮಿ ರಾಸ್ಕಲ್ ಎಂದು ಮಹಿಳೆಗೆ ಹೇಳಿರುವುದಕ್ಕೆ ಕ್ರಿಮಿನಲ್ ಕೇಸು ಹಾಕಬಹುದು. ಇಂತದನ್ನು ಬಿಟ್ಟು ಸರಕಾರವನ್ನು ಪ್ರಶ್ನಿಸಿರುವುದಕ್ಕೆ ಕೇಸು ಹಾಕಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಇದನ್ನು ಶೀಘ್ರವಾಗಿ ಹಿಂಪಡೆಯುವಂತೆ ಒತ್ತಾಯಿಸುತ್ತದೆ ಎಂದರು.

ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ:

ರಾಜ್ಯ ಸರಕಾರ ಅವಧಿ ಮುಗಿದ ಗ್ರಾ.ಪಂಗಳಿಗೆ ಆಡಳಿತಾಧಿಕಾರಿ ನೇಮಿಸುವ ಬದಲು ರಾಜಕೀಯ ಪಕ್ಷದ ಸದಸ್ಯರನ್ನು ನೇಮಿಸಲು ಮುಂದಾಗಿರುವುದನ್ನು ವಿರೋಧಿಸುವುದಾಗಿ ತಿಳಿಸಿದರು. ಸರಕಾರ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಈಗಾಗಲೇ ಪ್ರತಿಭಟನ ನಡೆಸಿದೆ. ಇನ್ನು ಮುಂದುವರೆದರೆ ನಾವು ಗ್ರಾ.ಪಂದಲ್ಲಿ ಪ್ರತಿಭಟನೆ ಮಾಡುವ ಮೂಲಕ ಜನರ ಬಳಿಗೆ ಹೋಗುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಅಧ್ಯಕ್ಷರುಗಳಾದ ಶೈಲೇಶ್‍ಕುಮಾರ್, ರಂಜನ್ ಜಿ.ಗೌಡ, ಎಸ್.ಸಿ ಘಟಕದ ಅಧ್ಯಕ್ಷ ವಸಂತ ಬಿ.ಕೆ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.