ನೀರುಮಾರ್ಗದ ಕೋವಿಡ್-19 ಸೋಂಕಿತ ಮಹಿಳೆಯ ಸಂಪರ್ಕಕ್ಕೆ ಬಂದ ಚಾರ್ಮಾಡಿಯ ಮೂವರಿಗೆ ಹೋಂ ಕ್ವಾರಂಟೈನ್  

  • ತಮಿಳುನಾಡಿನಿಂದ ಗಂಡಿಬಾಗಿಲಿಗೆ ಬಂದ 3 ಮಂದಿಗೂ ಕ್ವಾರಂಟೈನ್

ಬೆಳ್ತಂಗಡಿ: ಮಂಗಳೂರಿನ ನೀರುಮಾರ್ಗ ನಿವಾಸಿಯಾದ 40 ವರ್ಷದ ಮಹಿಳೆಯ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆಕೆಯ ಮನೆಯಲ್ಲಿ ಸಂಪರ್ಕಕ್ಕೆ ಬಂದು ಇತ್ತೀಚೆಗೆ ವಾಪಾಸಾಗಿರುವ ತಾಲೂಕಿನ ಚಾರ್ಮಾಡಿ ಗ್ರಾಮದ ಮಹಿಳೆ (ಸಹೋದರಿ) ಹಾಗೂ ಇಬ್ಬರು ಮಕ್ಕಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 

ಹೋಂ ಕ್ವಾರಂಟೈನ್ ಮಾಡಿರುವ ಈ ಮೂವರ ಗಂಟಲ ದ್ರವ ಮಾದರಿಯನ್ನು ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಹಿತಿ ನೀಡಿದೆ.
ನೀರುಮಾರ್ಗದ 40 ವರ್ಷದ ಮಹಿಳೆ ಅಸ್ತಮಾ ಮತ್ತು ಬಿಪಿಯಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸಲು ಚಾರ್ಮಾಡಿ ಗ್ರಾಮದ ಮಹಿಳೆ ಹಾಗೂ ಇಬ್ಬರು ಮಕ್ಕಳು ತೆರಳಿದ್ದರು.

ತಮಿಳುನಾಡಿನಿಂದ ಬಂದ ಗಂಡಿಬಾಗಿಲು ಪ್ರದೇಶದ ಕಂಡಿಬಾಗಿಲಿನ ಮೂವರಿಗೆ ಕ್ವಾರಂಟೈನ್:
ಅತಿ ಹೆಚ್ಚು ಕೊರೊನಾ ಸೋಂಕಿರುವ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕಾರಿನಲ್ಲಿ ಆಗಮಿಸಿದ ನೆರಿಯ ಗ್ರಾಮದ ಗಂಡಿಬಾಗಿಲು ಪ್ರದೇಶದ ಕಂಡಿಬಾಗಿಲು ನಿವಾಸಿಗಳಾಗಿರುವ ಮೂವರು ಮನೆಗಳಿಗೆ ಮರಳಿರುವುದು ತಿಳಿದ ಅಕ್ಕಪಕ್ಕದ ಮನೆಯವರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಆ ಬಳಿಕ ನೆರಿಯ ಗ್ರಾ.ಪಂ., ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಧರ್ಮಸ್ಥಳ ಪೊಲೀಸರು ಅವರನ್ನು ಆಲಂಗಾಯಿ ಆಶ್ರಮ ಶಾಲೆಯಲ್ಲಿ ಸರ್ಕಾರಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ನೆರಿಯ ಗ್ರಾ.ಪಂ. ಅಧ್ಯಕ್ಷ ಪಿ.ಮಹಮ್ಮದ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.