ಬಳಂಜ: ಸಮಾನ ಮನಸ್ಕರ ತಂಡದಿಂದ 85 ಕುಟುಂಬಗಳಿಗೆ ಅಕ್ಕಿ, ಉಪ್ಪಿನಕಾಯಿ ವಿತರಣೆ

ಬಳಂಜ: ಕೊರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದು, ನಮ್ಮ ದೇಶ ಲಾಕ್‌ಡೌನ್ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೆಲವರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ.ಇಂತಹ ಸಮಯದಲ್ಲಿ ಬಳಂಜದಲ್ಲಿ ಕೆಲವು ಯುವಕರು ಸಮಾನ ಮನಸ್ಕರ ತಂಡವನ್ನು ಕಟ್ಟಿ ಬಳಂಜ ಪರಿಸರದ 85 ಕುಟುಂಬಗಳಿಗೆ ಅಕ್ಕಿ ಹಾಗೂ ಉಪ್ಪಿನಕಾಯಿ ವಿತರಿಸಿದರು.

ಬಳಂಜ ಗ್ರಾ. ಪಂ ಸದಸ್ಯ, ಸಮಾಜ ಸೇವಕ ಯಶೋಧರ ಶೆಟ್ಟಿ ಅಟ್ಲಾಜೆಯವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಸುಮಾರು 85 ಮನೆಗಳಿಗೆ ತಲಾ ಒಂದು ಕೆ.ಜಿ ಉಪ್ಪಿನಕಾಯಿ, 10ಕೆ.ಜಿ ಅಕ್ಕಿಯಂತೆ ಒಟ್ಟು 8.50 ಕ್ವಿಂಟಾಲ್ ಅಕ್ಕಿ ಹಾಗೂ 85 ಕೆ.ಜಿ ಉಪ್ಪಿನಕಾಯಿ ವಿತರಿಸಿದರು.

ಈ ಸಂದರ್ಭ ಉದ್ಯಮಿ ಪುರುಷೋತ್ತಮ ಬಿ.ಸಿರೋಡ್, ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರು, ಪ್ರಗತಿಪರ ಕೃಷಿಕ ಚಂದ್ರಶೇಖರ ಉಪಾಧ್ಯಾಯ, ಅರ್ಚಕ ಈಶ್ವರ ಭಟ್ ಬಳಂಜ, ಕೃಷಿಕ ತೀರ್ಥರಾಜ್, ಉದ್ಯಮಿ ಗಣೇಶ್ ಬಿ.ಕೆ, ಅಳದಂಗಡಿ ಸಿ.ಎ ಬ್ಯಾಂಕ್ ನಿರ್ದೇಶಕ ಗುರುಪ್ರಸಾದ್ ದರಿಮಾರ್, ಉದ್ಯೋಗಿ ಪ್ರಜ್ವಲ್ ಗುರುವಾಯನಕೆರೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.