ರೋಟರಿ ಕ್ಲಬ್ ಬೆಳ್ತಂಗಡಿಯಿಂದ ಸುದ್ದಿ ಕಚೇರಿಗೆ ಸೇನಿಟೈಸರ್ ಯಂತ್ರ ಕೊಡುಗೆ

ಬೆಳ್ತಂಗಡಿ: ಸುದ್ದಿ ಬಿಡುಗಡೆ ಮಾಧ್ಯಮ ಕಚೇರಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಸೇನಿಟೈಸರ್ ಯಂತ್ರ ಕೊಡುಗೆಯಾಗಿ ನೀಡಲಾಯಿತು.

ಮೇ. 20 ರಂದು ಸುದ್ದಿ  ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ಗೌಡ, ನಿಯೋಜಿತ ಅಧ್ಯಕ್ಷ ಧನಂಜಯ ರಾವ್ ಬಿ.ಕೆ ಮತ್ತು ನಿಯೋಜಿತ ಕಾರ್ಯದರ್ಶಿ ಶ್ರೀಧರ ಕೆ.ವಿ ಅವರು ಸುದ್ದಿ ವ್ಯವಸ್ಥಾಪಕ ಎನ್ ಮಂಜುನಾಥ ರೈ ಅವರಿಗೆ ಯಂತ್ರ ಹಸ್ತಾಂತರಿಸಿದರು.

ಈ ಸಂದರ್ಭ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಪ್ರತಾಪಸಿಂಹ ನಾಯಕ್, ಶ್ರೀಕಾಂತ ಕಾಮತ್, ಯಶವಂತ ಪಟವರ್ಧನ್, ಸುದ್ದಿ ಬಿಡುಗಡೆ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿಗಾರ ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು. ವ್ಯವಸ್ಥಾಪಕ ಮಂಜುನಾಥ ರೈ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.