ತಾ.ಪಂ.ಸದಸ್ಯ ಜೋಯಲ್ ಮಂಡೋನ್ಸಾ ರಿಂದ 900 ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಮಾಲಾಡಿ: ಇಲ್ಲಿಯ ತಾ.ಪಂ ಕ್ಷೇತ್ರದ ಮಾಲಾಡಿ ಮತ್ತು ಸೋಣಂದೂರು ಗ್ರಾಮದ ಬಡ ಕುಟುಂಬಗಳಿಗೆ ತಾಲೂಕು ಪಂಚಾಯತ್ ಸದಸ್ಯ ಜೋಯಲ್ ಮೆಂಡೋನ್ಸಾ ತನ್ನ ವೈಯಕ್ತಿಕ ನೆಲೆಯಲ್ಲಿ ಅಕ್ಕಿ ಮತ್ತು ಇತರ ಆಹಾರ‌ ಸಾಮಾಗ್ರಿಗಳನ್ನೊಳಗೊಂಡ 900 ಕಿಟ್ ಗಳನ್ನು ಮೇ.17 ರಂದು ಶಾಸಕ ಹರೀಶ್ ಪೂಂಜ ವಿತರಿಸಿ ಇಡೀ ರಾಜ್ಯದಲ್ಲಿಯೇ ತಾ.ಪಂ ಸದಸ್ಯ ತನ್ನ ವೈಯಕ್ತಿಕ ನೆಲೆಯಲ್ಲಿ ಇಷ್ಟು ಕಿಟ್ ಗಳನ್ನು ನೀಡುವುದು ಇದೇ ಮೊದಲು ಎಂದು ಹೇಳಿ ಇವರ ಉತ್ತಮ ‌ಕೆಲಸಕ್ಕೆ ಶಾಸಕರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ‌ ಕಾರ್ಯದರ್ಶಿ ಶ್ರೀನಿವಾಸ ಧರ್ಮಸ್ಥಳ, ಉದ್ಯಮಿ ಬಿಗ್ ಬ್ರದರ್ಸ್ ಲೆನ್ಸಿ ಪಿಂಟೋ, ಮಾಲಾಡಿ ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.