ಗೇರುಕಟ್ಟೆ- ಸಂಬೋಳ್ಯ ಕಾಂಕ್ರೀಟ್ ರಸ್ತೆ ಕಳಪೆ ಗ್ರಾಮಸ್ಥರ ಆಕ್ರೋಶ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಸಂಬೋಳ್ಯ- ಓಡುರೊಟ್ಟು ಕ್ರಾಸ್ ಎಂಬಲ್ಲಿ ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಿಯ ಪಂಚಾಯತು ಅನುದಾನದಿಂದ ಕಳೆದ ಮೂರು ತಿಂಗಳ ಹಿಂದೆ ಈ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದೆ.ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಮೊದಲು ಅಡಿ ಪಾಯ ಹಾಕದೇ ಮಣ್ಣಿನ ರಸ್ತೆಯ ಮೇಲೆ ಕಾಂಕ್ರೀಟ್ ಹಾಕಲಾಗಿದೆ.ಅದುದರಿಂದ ಈಗಾಗಲೇ ಒಂದೆರಡು ಸಣ್ಣಪುಟ್ಟ ಮಳೆಗೆ ರಸ್ತೆ ಒಡೆದು ಹೋಗಿದೆ.ಗ್ರಾಮೀಣ ಭಾಗದ ಈ ರಸ್ತೆಯಲ್ಲಿ ಕೃಷಿಕರ ಸಣ್ಣಪುಟ್ಟ ವಾಹನಗಳು ಮಾತ್ರ ಸಂಚಾರ ಮಾಡುತ್ತವೆ. ಯಾವುದೇ ಘನವಾಹನಗಳು ಸಂಚಾರಿಸದೆ ರಸ್ತೆಯ ಪರಿಸ್ಥಿತಿ ಹೀಗಿರುವಾಗ ಮುಂದಿನ ಮಳೆಗಾಲದಲ್ಲಿ ಜನರಿಗೆ ಓಡಾಡುವಾಗ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆ ನಿರ್ಮಾಣದಲ್ಲಿ ಗುತ್ತಿಗೆದಾರರ, ಜನಪ್ರತಿನಿಧಿಗಳ, ಸಂಬಂಧ ಪಟ್ಟ ಮೇಲಧಿಕಾರಿಗಳ ಪಾಲುದಾರಿಕೆಯ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೇವಲ ಮೂರು ತಿಂಗಳಿನಲ್ಲಿಯೇ ಈ ರಸ್ತೆ ಕಳಪೆಯಾಗಿ ಹೋಗುವುದಾದರೆ ಈ ಮಳೆಗಾಲ ಮುಗಿಯುದರೊಳಗೆ ಈ ರಸ್ತೆ ಸಂಪೂರ್ಣ ಹದಗೆಡುವುದರಲ್ಲಿ ಸಂಶಯವಿಲ್ಲ. ಪಂಚಾಯತ್ ಕಚೇರಿಯ ಕೆಲವೇ ಅಂತರದಲ್ಲಿ ಈ ಕಳಪೆ ಕಾಮಗಾರಿ ನಡೆದಿದ್ದು, ಕಣ್ಣಿದ್ದು ಜಾಣಕುರುಡು ಪ್ರದರ್ಶಿಸುವ ಪಂಚಾಯತ್ ಆಡಳಿತದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಸ್ಥರು ರಸ್ತೆಗಾಗಿ ವರ್ಷಾನುಗಟ್ಟಲೆ ಪಂಚಾಯತುಗೆ ಅರ್ಜಿ ಸಲ್ಲಿಸಿ ಕೊನೆಗೂ ಕಳಪೆ ಗುಣಮಟ್ಟದ ಕಾಮಗಾರಿ ರಸ್ತೆ ಮಾತ್ರ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತವಾದಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.