ಧರ್ಮಸ್ಥಳ ಬೊಳಿಯಾರು ಬಳಿ ಅಪಾಯ ಆಹ್ವಾನಿಸುತ್ತಿದೆ ತುಂಡಾಗಿ ನಿಂತ ಧೂಪದ ಮರ

ಧರ್ಮಸ್ಥಳ: ಇದೀಗ ತಾಲೂಕಿನಾಧ್ಯಂತ ಮಳೆಗಾಲ ಪೂರ್ವವಾಗಿ ಹವಾಮಾನ ವೈಪರೀತ್ಯದಿಂದ ಮಳೆಯಾಗುತ್ತಿದೆ. ಮಳೆಯೊಂದಿಗೆ ಗಾಳಿ ಬೀಸಿದಾಗ ಹೆಚ್ಚಾಗಿ ಮರಗಳು ಉರುಳಿ ಬಿದ್ದರೆ ಅತೀ ಹೆಚ್ಚು ಹಾನಿ ಸಂಭವಿಸುವುದು ಮೆಸ್ಕಾಂ ಇಲಾಖೆಗೆ. ಒಂದು ವೇಳೆ ಮರಗಳು ವಿದ್ಯುತ್ ಲೈನ್‌ನ ಮೇಲೆ ಬಿದ್ದರೆ ಹಲವು ಕಂಬಗಳು ನೆಲಕ್ಕುರುಳುತ್ತವೆ. ಅಂತಹದ್ದೇ ಒಂದು ಅಪಾಯಕಾರಿ ಮರ ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಕಾಣಸಿಕ್ಕಿದೆ.

ಧೂಪದ ಎಣ್ಣೆ ಕೃಷಿಯಿಂದ ಅಪಾಯ: ಚಿತ್ರದಲ್ಲಿ ಕಾಣುವಂತೆ ಬೊಳಿಯಾರು ಈ ಪರಿಸರದಲ್ಲಿ ಧೂಪದ ಎಣ್ಣೆ(ಹಾಲ್ಮಡ್ಡಿ) ಕೃಷಿಯಿಂದಾಗಿ ಒಂದು ಮರ ತುಂಡಾಗಿದ್ದು, ಅದು ವಿದ್ಯುತ್ ಕಂಬದ ರಕ್ಷಣೆಗೆ ಇಟ್ಟ ಇನ್ನೊಂದು ಕಂಬದ ಮೇಲೆಯೇ ಒರಗಿ ನಿಂತಿದೆ. ಸ್ವಲ್ಪ ಗಾಳಿ ಬಂದರೂ ಬೀಳುವ ಸ್ಥಿತಿಯಲ್ಲಿದ್ದು ಅದನ್ನು ಈಗಲೇ ತೆರವುಗೊಳಿಸಿದಲ್ಲಿ ಮೆಸ್ಕಾಂ ಇಲಾಖೆಗೆ ಕಂಬಗಳು ತುಂಡಾಗುವ ಅಪಾಯ ತಪ್ಪಿಸಬಹುದು. ಇದೇ ರೀತಿ ಇನ್ನೂ ಹಲವು ಗ್ರಾಮಗಳಲ್ಲಿ ಹಾಲ್ಮಡ್ಡಿಗಾಗಿ ಮರಗಳಿಗೆ ಗಡಿ ಹಾಕಲಾಗಿದ್ದು ಎಲ್ಲ ಕಡೆ ಇದೇ ರೀತಿಯ ಅಪಾಯ ಕಾದಿದೆ. ಆದುದರಿಂದ ಮೆಸ್ಕಾಂ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮುಂಜಾಗ್ರತೆ ವಹಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.