ಶಿಶಿಲ ಕಪಿಲಾ ನದಿ ಸ್ವಚ್ಚತಾ ಅಭಿಯಾನ

ಶಿಶಿಲ: ಕಪಿಲಾ ನದಿಯಲ್ಲಿ ಮಳೆಗಾಲದಲ್ಲಿ ಪ್ರವಾಹ ಬರುವ ಸಂದರ್ಭದಲ್ಲಿ ನದಿ ಬದಿಯ ಮರಗಳು ಉರುಳಿ ಬಿದ್ದು ದೇವಸ್ಥಾನದ ಬದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡು ಬಹಳಷ್ಟು ಹಾನಿಯಾಗುತ್ತಿತ್ತು. ಇಂತಹ ಸಮಸ್ಯೆಯನ್ನು ಮನಗಂಡ ಶಿಶಿಲೇಶ್ವರ ದೇವಸ್ಥಾನದ ಭಕ್ರವೃಂದ ಯುವಕ ಮಂಡಲ ಹಾಗೂ ಅರಣ್ಯ ಇಲಾಖೆ ಹೊಳೆಗಂಡಿಯಿಂದ ದೇವಸ್ಥಾನದವರೆಗೆ ಹೊಳೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ. 

 

ನದಿಯಲ್ಲಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸುಮಾರು 80 ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭೇಟಿ ನೀಡಿದ ಶಾಸಕ ಹರೀಶ್ ಪೂಂಜಾ ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿ ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಮರ ಸಿಲುಕಿದರೆ ಕೂಡಲೇ ತೆರವುಗೊಳಿಸಲು ಹಿಟಾಚಿಯೊಂದನ್ನು ಇಲ್ಲಿಯೇ ವ್ಯವಸ್ಥೆ ಮಾಡಬೇಕೆಂದು ವ್ಯವಸ್ಥೆ ಮಾಡಿದರು.

ಭಾಗವಹಿಸಿದ ಎಲ್ಲರಿಗೂ ಶಿಶಿಲ ಗ್ರಾ.ಪಂ ವತಿಯಿಂದ ಮಾಸ್ಕ್‌ಗಳನ್ನು ವಿತರಿಸಲಾಯಿತು. ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ನಾಗಲಿಂಗ, ಸುನಿಲ್, ನಾಗಪ್ಪ ಮಾರ್ಗದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.