HomePage_Banner_
HomePage_Banner_

ನಿಯಮಾನುಸಾರ ಮೇ. 18 ರಿಂದ ದಂತ ಕ್ಲಿನಿಕ್ ಗಳು ಪುನರಾರಂಭ ಭಾರತೀಯ ದಂತ ವೈದ್ಯಕೀಯ ಸಂಘದಿಂದ ಡಾ.‌ಎಂ.ಎಂ ದಯಾಕರ್

ಬೆಳ್ತಂಗಡಿ : ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕುಗಳ ಎಲ್ಲಾ ದಂತ ಚಿಕಿತ್ಸಾ ಕೇಂದ್ರಗಳು ಮೇ 18 ರಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಿರುತ್ತವೆ ಎಂದು ಭಾರತೀಯ ದಂತ ವೈದ್ಯರ ಸಂಘದ ಪದಾಧಿಕಾರಿ ಡಾ. ಎಂ .ಎಂ‌ ದಯಾಕರ್ ಉಜಿರೆ ತಿಳಿಸಿದ್ದಾರೆ.

ಚಿಕಿತ್ಸೆಗೆ ಬರುವ ಎಲ್ಲಾ ರೋಗಿಗಳು ತಪ್ಪದೆ ಚಿಕಿತ್ಸಾ ಕೇಂದ್ರದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ಹೆಸರು ನೋಂದಾಯಿಸಬೇಕು ಹಾಗೂ ಚಿಕಿತ್ಸಾ ಕೇಂದ್ರದ ಒಳಗೆ ಸಾಮಾಜಿಕ ಅಂತರವನ್ನು ಪಾಲಿಸತಕ್ಕದ್ದು. ಪ್ರತಿಯೊಬ್ಬ ರೋಗಿಯೋ ಮೌತ್ ಮಾಸ್ಕ ಹಾಕಿ ಕೊಂಡಿರಬೇಕು. ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಹೊರತುಪಡಿಸಿ ಉಳಿದವರು ಜೊತೆಯಲ್ಲಿ ಬೇರೆಯವರನ್ನು ಕರೆ ತರಬಾರದು .ಶೀತ, ಕೆಮ್ಮು ,ನೆಗಡಿ ,ಜ್ವರ ಉಸಿರಾಟದ ತೊಂದರೆ ಇರುವವರು ದಂತ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಬಾರದು. ಹೋಂ ಕ್ವಾರಂಟೈನ್ ನಲ್ಲಿ ಇರುವವರು ಆ ಸಮಯದಲ್ಲಿ ದಂತ ಚಿಕಿತ್ಸೆ ವೈದ್ಯರನ್ನು ಸಂಪರ್ಕಿಸ ಬಾರದು ,ಚಿಕಿತ್ಸಾ ಸಮಯದಲ್ಲಿ ಯಾವುದಾದರೂ ರೋಗಿಗಳಲ್ಲಿ ಕೊರೊನದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರು ಆರೋಗ್ಯ ಮಾಹಿತಿಯನ್ನು ಸಮೀಪದ ಕೋವಿಡ್ ಕೇಂದ್ರಕ್ಕೆ ತಿಳಿಸತಕ್ಕದ್ದು. ಇಲ್ಲಿನ ಎಲ್ಲಾ ದಂತ ಚಿಕಿತ್ಸಾ ಕೇಂದ್ರದ ದಂತವೈದ್ಯರು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ತಿಳಿಸಿರುವ ಕೋವಿಡ್ 19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.