ಲಾಕ್‍ಡೌನ್ ಅವಧಿಯಲ್ಲಿ ಬಾವಿ ತೋಡಿ ಸೈ ಎನಿಸಿಕೊಂಡ ಯುವಕರು 12 ದಿನದಲ್ಲಿ ಸುಮಾರು 40 ಅಡಿ ಆಳದಲ್ಲಿ ಸಿಕ್ಕಿದ ನೀರಿನ ಸೆಲೆ

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಹಾಗೂ ಬೇಸಿಗೆಯ ಬೇಗೆ ಒಟ್ಟಾಗಿ ಬಂದಿರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಕೆಲವು ಯುವಕರು ಬಾವಿ ತೋಡುವ ಮೂಲಕ ನೀರಿನ ಸೆಲೆಯನ್ನು ಕಂಡುಕೊಂಡಿದ್ದಾರೆ.

ತಾಲೂಕಿನ ಕರಂಬಾರು ಗ್ರಾಮದ ಬಂತಡ್ಕದ ಒಂದು ಕುಟುಂಬದ 6 ಮಂದಿ ಹಾಗೂ ನೆರೆ ಮನೆಗಳ ಐವರ ಸಹಾಯದಿಂದ 12 ದಿನಗಳಲ್ಲಿ ಸುಮಾರು 40 ಅಡಿ ಆಳದ ಬಾವಿ ತೋಡಿ ನೀರಿನ ಸೆಲೆ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಸಿಗೆಯ ಸಮಯದಲ್ಲಿ ಬಂತಡ್ಕದ ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತೀವ್ರ ಕೊರತೆ ಕಾಡುತಿತ್ತು. ಅದಕ್ಕಾಗಿ ನೀರಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾಲೋನಿಯ ಯುವಕರು ಒಂದಾಗಿ ಬಾವಿ ತೋಡಿ ನೀರಿನ ಸಮಸ್ಯೆಯ ಪರಿಹರಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.