ಇಳಂತಿಲ ಸೌಹಾರ್ದ ವೇದಿಕೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಕಿಟ್ ವಿತರಣೆ ಕೊರೊನಾ ವಾರಿಯರ್ಸ್ ಆಶಾ ಕಾರ್‍ಯಕರ್ತೆಯರಿಗೆ ಸರ್ಕಾರ ಗೌರವ ಧನ ಹೆಚ್ಚಿಸಲಿ-ವಸಂತ ಬಂಗೇರ

ಬೆಳ್ತಂಗಡಿ: ದಿನಪೂರ್ತಿ ಊರೆಲ್ಲಾ ಸುತ್ತಾಡಿ, ಮನೆ ಮನೆ ಭೇಟಿ ನೀಡಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸೇನಾನಿಗಳಂತೆ ಕೆಲಸ ಮಾಡುವ ಕೊರೊನಾ ವಾರಿಯರ್ಸ್ ಆಶಾ ಕಾರ್‍ಯಕರ್ತೆಯರಿಗೆ ಗೌರವ ದೊರಕವಂತಾಗಬೇಕು ಮತ್ತು ಸರ್ಕಾರ ಅವರುಗಳಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಅವರು ಮೇ 12ರಂದು ಇಳಂತಿಲ ಸೌಹಾರ್ದ ವೇದಿಕೆ ವತಿಯಿಂದ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಠ ಎದುರಿಸುತ್ತಿರುವ ಇಳಂತಿಲ ಗ್ರಾಮದ 425 ಮಂದಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮತ್ತು ಗ್ರಾಮದ 4 ಮಂದಿ ಆಶಾ ಕಾರ್‍ಯಕರ್ತೆಯರಾದ ರತ್ನಾ ಕುಮಾರಿ, ಲೀಲಾವತಿ, ಪ್ರೇಮ, ಲತಾ ಇವರನ್ನು ಸನ್ಮಾನಿಸಿ ಮಾತನಾಡಿದರು.

ಕೊರೊನಾ ವೈರಸ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶಾ ಕಾರ್‍ಯಕರ್ತೆಯರು ನಿಜವಾದ ಸೇನಾನಿಗಳು, ಅವರು ಕನಿಷ್ಠ ತಿಂಗಳಿಗೆ 4 ಸಾವಿರ ರೂಪಾಯಿ ಗೌರವ ಧನ ಪಡೆದು ದಿನಪೂರ್ತಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲೂ ಸರ್ಕಾರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಗೌರವ ಧನವನ್ನು ಇನ್ನೂ ಕೊಟ್ಟಿರುವುದಿಲ್ಲ, ಸರ್ಕಾರ ತಕ್ಷಣ ಇವರ ಗೌರವ ಧನ ಕೊಡುವುದಕ್ಕೆ ವ್ಯವಸ್ಥೆ ಮಾಡಬೇಕು ಮತ್ತು ಗೌರವ ಧನವನ್ನು 8 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದ ಅವರು ಇದೀಗ ಇಲ್ಲಿನ ಸಂಘಟನೆ ಅವರನ್ನು ಗುರುತಿಸುವುದರ ಜೊತೆಗೆ ದಾನಿಗಳ ಸಹಾಯ ಪಡೆದುಕೊಂಡು ಆಹಾರ ಸಾಮಾಗ್ರಿ ನೀಡುವ ಸೇವೆ ಮೆಚ್ಚುವಂತದ್ದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ ಇಳಂತಿಲದ ಸೌಹಾರ್ದ ವೇದಿಕೆ ಸಂಘಟನೆ ಹಲವು ಜನಪರ ಕಾರ್‍ಯಕ್ರಮಗಳ ಮೂಲಕ ಗ್ರಾಮದ ಜನರ ಪ್ರೀತಿ ಗಳಿಸಿದ್ದು, ಇದರ ಹಿಂದೆ ಕೆಲಸ ಮಾಡುವ ಯುವಕರು ಪ್ರಶಂಸಾರ್ಹರು ಎಂದರು.

ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸೌಹಾರ್ದ ವೇದಿಕೆ ಕಾರ್‍ಯದರ್ಶಿ ಯು.ಕೆ. ಯೂಸುಫ್ ಪೆದಮಲೆ ಸಂಘಟನೆ ಹಮ್ಮಿಕೊಂಡಿರುವ ಕಾರ್‍ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಣ್ಣೀರುಪಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಂ, ಇಳಂತಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ಫಯಾಝ್, ಈಶ್ವರ ಗೌಡ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ| ರಾಜಾರಾಮ್, ಸ್ಥಳೀಯ ಉದ್ಯಮಿಗಳಾದ ಝಕರಿಯಾ ಅಗ್ನಾಡಿ, ಸುಲೈಮಾನ್ ಹಾಜಿ, ಕರೀಂ ಹಾಜಿ, ಹನೀಫ್

ಕಡವಿನಬಾಗಿಲು, ಸ್ಥಳೀಯ ಪ್ರಮುಖರಾದ ರೊನಾಲ್ಡ್ ಪಿಂಟೋ, ಮುಸ್ತಫಾ ಮುಸ್ಲಿಯಾರ್, ನವೀನ್ ಬ್ರಾಗ್ಸ್, ಡಾ| ಆಶಿಕ್, ವಿನ್ಸೆಂಟ್ ಬ್ರಾಗ್ಸ್, ಇಕ್ಬಾಲ್ ಯು.ಟಿ., ಜಲೀಲ್, ಅಬ್ದುಲ್ ರಹಿಮಾನ್, ಸದಾಶಿವ ರೈ ಉಪಸ್ಥಿತರಿದ್ದರು. ಇಳಂತಿಲ ಸೌಹಾರ್ದ ವೇದಿಕೆ ಅಧ್ಯಕ್ಷ ಮನೋಹರ್ ಕುಮಾರ್ ಸ್ವಾಗತಿಸಿ, ಅಶ್ವಿರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.