ಗೇರುಕಟ್ಟೆ ಜವನೇರ್ ವಾಟ್ಸಪ್ ಗ್ರೂಪ್‌ ನಿಂದ ಬಡ ಮಹಿಳೆಯ ಮನೆ ದುರಸ್ತಿ

ದುರಸ್ತಿಯ ಮೊದಲು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗೇರುಕಟ್ಟೆ ಜನತಾ ಕಾಲೋನಿ ಬಡ ಕುಟುಂಬದ ನಿವಾಸಿ ಜಯಂತಿ ಅವರ ಹಳೆಯ ಮನೆಯನ್ನು ಗೇರುಕಟ್ಟೆ “ನಮ್ಮ ಜವನೇರ್” ವಾಟ್ಸಪ್ ಗ್ರೂಪ್‌ ಸದಸ್ಯರ ತಂಡದ ವತಿಯಿಂದ ದುರಸ್ತಿ ಕೆಲಸ ನಡೆಯಿತು.

ಸುಮಾರು 15 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಜಯಂತಿಯ ಅವರ ತನ್ನ 2 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.ಇವರ ಪತಿ ದಿ| ಓಬಯ್ಯ ಪೂಜಾರಿ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮಸ್ಥರಿಗೆ ಕುಡಿಯುವ ನೀರಿನ ಪಂಪ್ಪು ಆಪರೇಟರ್ ಸಹಾಯಕರಾಗಿ ಸುಮಾರು 16 ವರ್ಷಗಳ ಕಾಲ ದಿನ ಕೂಲಿ ಕಾರ್ಮಿಕನಾಗಿ ದುಡಿದರು.ಹಾಗೂ ಅನಾರೋಗ್ಯದಿಂದ ಕಳೆದ 1 ವರುಷ 4 ತಿಂಗಳ ಹಿಂದೆ ನಿಧನರಾದರು. ದುಡಿದು ಕುಟುಂಬಕ್ಕೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ನಂತರ ಚಿಕ್ಕ ಮಕ್ಕಳೊಂದಿಗೆ ಅದೇ ಪ್ಲಾಸ್ಟಿಕ್ ಹಾಕಿದ ಮನೆಯಲ್ಲೇ ವಾಸಿಸುತ್ತಿದ್ದಾರೆ.

ದುರಸ್ತಿಯ ನಂತರ

ಇವರ ಕಷ್ಟದ ಪರಿಸ್ಥಿತಿಯನ್ನು ಸ್ಥಳೀಯ ಯುವಕರು ಗಮನಿಸಿದರು.ಸ್ಥಳಕ್ಕೆ ಭೇಟಿ ನೀಡಿದಾಗ ಕುಡಿಯುವ ನೀರು,ಶೌಚಾಲಯ, ವಿದ್ಯುತ್ತು ಸೌಕರ್ಯವಿಲ್ಲ, ಬಿರುಕು ಬಿಟ್ಟಿರುವ ಮಣ್ಣಿನ ಗೋಡೆ ಹಾಗೂ ವಾಸಕ್ಕೆ ಯೋಗ್ಯವಲ್ಲದ ಮನೆಯ ಪರಿಸ್ಥಿತಿ ಕಂಡ ಯುವಕರು ದಂಗಾದರು.ಭಾರೀ ಮಳೆ ಗಾಳಿಯಿಂದ ಬಡ ಕುಟುಂಬಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿದು ಕೊಂಡರು. ತಕ್ಷಣ “ಗೇರುಕಟ್ಟೆ ಜವನೇರ್” ವಾಟ್ಸಪ್ ಗ್ರೂಪ್‌ ರಚನೆ ಮಾಡಿದರು.

ಸುಮಾರು 150 ಕ್ಕೂ ಹೆಚ್ಚು ಎಲ್ಲಾ ಜಾತಿ ಧರ್ಮದ ಯುವಕರು ಸದಸ್ಯರಾದರು. ಸುಮಾರು 30 ಸಾವಿರ ವೆಚ್ಚದಲ್ಲಿ ಮನೆಯ ಮಾಡು ದುರಸ್ತಿಗೆ ಮುಂದಾದರು. ಬಡ ಕುಟುಂಬದ ವಾಸಕ್ಕೆ ಮನೆಯ ದುರಸ್ತಿಯನ್ನು ಮಾಡಿ ಕೊಟ್ಟರು. ಈ ಸಂದರ್ಭದಲ್ಲಿ ಕಷ್ಟಕ್ಕೆ ಸ್ಪಂದಿಸಿದ ಯುವಕರ ಸಾಧನೆಯನ್ನು ಗುರುತಿಸಿದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.