ಕ್ಷುಲ್ಲಕ ಕಾರಣದಿಂದ ನಿಡ್ಲೆ ಗ್ರಾಮದಲ್ಲಿ ಕತ್ತಿಯಿಂದ‌ ಕಡಿದು ಹಲ್ಲೆ ಕಣ್ಣು ಜಖಂ: ದೃಷ್ಟಿ ಮರಳುವುದು ಅನುಮಾನ

ನಿಡ್ಲೆ: ಕ್ಷುಲ್ಲಕ ಕಾರಣಕ್ಕೆ‌ ನೆರೆಮನೆಯವರೊಳಗಿನ ಜಗಳದ ಪರಿಣಾಮ ಸಮೀಪದ ಸಂಬಂಧಿಗೆ ಕತ್ತಿಯಿಂದ ಕಡಿಯುವ ಮಟ್ಟಕ್ಕೆ ಹೋಗಿದ್ದು, ಕಡಿಸಿಕೊಂಡ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ.

ನಿಡ್ಲೆ ಗ್ರಾಮದ ಪಿಲಿಕಜೆ‌ ಎಂಬಲ್ಲಿನ‌ ನಿವಾಸಿ ಜಗದೀಶ್ ಮತ್ತು ಚಂದ್ರಶೇಖರ್ ಅವರು ಸೇರಿ ಕ್ಷುಲ್ಲಕ ವಿಚಾರದಲ್ಲಿ ತಮ್ಮ ಸಹೋದರ ಸಂಬಂಧಿ, ಅರಣ್ಯ ಇಲಾಖೆಯ ಸಿಬ್ಬಂದಿಯೂ ಆಗಿರುವ ರಾಘವೇಂದ್ರ ಎಂಬವರಿಗೆ ಮಲಗಿದಲ್ಲಿಗೆ ಕತ್ತಿಯಲ್ಲಿ ಹಲ್ಲೆ ನಡೆಸಿದ್ದಾಗಿದೆ.

ಕತ್ತಿಯಿಂದ ಕುತ್ತಿಗೆಗೆ ಕಡಿಯುವ ಯತ್ನದ ಮಧ್ಯೆ ಜಾಗ ಬದಲಾಗಿ ಕಣ್ಣಿನ ಭಾಗಕ್ಕೆ ಬಿದ್ದಿದೆ ಎನ್ನಲಾಗಿದೆ.

ಹಲ್ಲೆಯಲ್ಲಿ ಗಾಯಾಳು ರಾಘವೇಂದ್ರ ರ ಕಣ್ಣು ಪೂರ್ತಿ ಜಖಂ ಆಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಕೌಟುಂಬಿಕ ಹಿನ್ನೆಲೆಯ ಜಗಳ ಇದೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಈ ಬಗ್ಗೆ
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.