ತಾಲೂಕು ಮುಸ್ಲಿಂ ಜಮಾಅತ್‌ನಿಂದ 250 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಮ್.ಜೆ.ಸಿ) ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ತಾಲೂಕಿನ ಬ್ಲಾಕ್ ಸಮಿತಿಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಒಟ್ಟು 250 ಅರ್ಹ ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ಅನ್ನು ಮೇ. 11 ರಂದು ವಿತರಿಸಲಾಯಿತು.

ತಾಲೂಕು ಮುಸ್ಲಿಂ ಜಮಾಅತ್ ಇದರ ಅಧ್ಯಕ್ಷ ಅಧ್ಯಕ್ಷ ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಕಾರ್ಯದರ್ಶಿ ಮುಹಮ್ಮದ್ ರಫಿ, ಉಪಾಧ್ಯಕ್ಷರಾದ ಅಬ್ಬೋನು ಮದ್ದಡ್ಕ, ಬಿ.ಎ ನಝೀರ್ ಬೆಳ್ತಂಗಡಿ, ಹಬೀಬ್ ಸಾಹೇಬ್ ಮಂಜೊಟ್ಟಿ, ಕಾರ್ಯದರ್ಶಿ ಆಲಿಯಬ್ಬ ಪುಲಾಬೆ, ಮುಹ್ಯುದ್ದೀನ್ ಉಜಿರೆ, ಅಶ್ರಫ್ ಚಿಲಿಂಬಿ ಮದ್ದಡ್ಕ, ಕೋಶಾಧಿಕಾರಿ ಎ.ಕೆ ಅಹಮ್ಮದ್ ಎರುಕಡಪ್ಪು, ವಿವಿಧ ಬ್ಲಾಕ್ ಸಮಿತಿಗಳ ಪದಾಧಿಕಾರಿಗಳಾದ ಪಿ.ಯು ಆಲಿಕುಂಞಿ ಸಖಾಫಿ ನಾವೂರು, ಆದಂ ಮಂಜೊಟ್ಟಿ, ಎಂ.ಕೆ ಬದ್ರುದ್ದೀನ್ ಪರಪ್ಪು, ಖಾಲಿದ್ ಪುಲಾಬೆ, ಝಾಕಿರ್ ಹುಸೈನ್ ಕಣಿಯೂರು, ಮುಹಮ್ಮದ್ ಬಲಿಪಾಯ, ತಲ್‌ಹತ್ ಎಂ.ಜಿ, ಸಲೀಂ ಕನ್ಯಾಡಿ, ಅಯ್ಯೂಬ್ ಗುರುವಾಯನಕೆರೆ, ಉಸ್ಮಾನ್ ಹಾಜಿ ಆಲಂದಿಲ, ಹಂಝ ಮದನಿ ಪೆರಾಲ್ದರಕಟ್ಟೆ, ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜಮಾಲುದ್ದೀನ್ ಲೆತೀಫಿ, ಶಮೀರ್ ವೇಣೂರು, ನೂರ್ ಅಹಮ್ಮದ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ಬಿ.ಎಮ್ ಹನೀಫ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರಸ್ತಾವನೆಗೈದರು.

ನೀಡಲಾದ ಕಿಟ್ ಅನ್ನು ಕೆಎಮ್‌ಜೆಸಿ ಯ 7 ಬ್ಲಾಕ್ ಗಳಲ್ಲಿ ಅಲ್ಲಿನ ಸಮಿತಿ ಆಯ್ದ ಕುಟುಂಬಗಳಿಗೆ ಈ ಕಿಟ್ ಅನ್ನು ತಲುಪಿಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.