ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಿದರ ಬಗ್ಗೆ ಕಾಂಗ್ರೇಸ್ ನೇತೃತ್ವದಲ್ಲಿ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಿದರ ಬಗ್ಗೆ ಗೂಡಂಗಡಿ ವ್ಯಾಪರಸ್ಥರು ಮತ್ತು ಕಾಂಗ್ರೇಸ್ ನೇತೃತ್ವದಲ್ಲಿ ನಗರ‌ ಪಂಚಾಯತ್ ಮುಂದೆ ಪ್ರತಿಭಟನೆ ಮೇ.11 ರಂದು ನಡೆಯಿತು.

ವಿಧಾನ ಪರಿಷತ್ತಿನ ಶಾಸಕ ಹರೀಶ್ ಕುಮಾರ್, ಬೆಳ್ತಂಗಡಿ ಮಾಜಿ‌ ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ ಮತ್ತು ಶೈಲೇಶ್ ಕುಮಾರ್ ಕುರ್ತೋಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್‌ ಕುಮಾರ್, ನಗರ ಪಂಚಾಯತ್ ಸದಸ್ಯರಾದ ಜಗದೀಶ ಡಿ, ಮುಸ್ತರ್‌ಜಾನ್ ಮೆಹಬೂಬ್, ಜನಾರ್ದನ, ಕಾಂಗ್ರೆಸ್ ‌ಅಲ್ಪಸಂಖ್ಯಾತರ ಘಟಕದ ಅಶ್ರಫ್ ನೆರಿಯ, ತಾ.ಪಂ‌ ಸದಸ್ಯ ಪ್ರವೀಣ್ ಕುಮಾರ್, ಕೆ.ಪಿ.ಸಿ.ಸಿ‌ ಸದಸ್ಯ ರಾಮಚಂದ್ರ ಗೌಡ, ಕಾಂಗ್ರೆಸ್ ಎಸ್ ಇ ಘಟಕದ ಅಧ್ಯಕ್ಷ ವಸಂತ ಬಿ.ಕೆ, ಚಂದು ಎಲ್, ರಮೀಝ್, ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ತೆರವುಗೊಳಿಸಿದ ಗೂಡಂಗಡಿಗಳು

ಗೂಡಂಗಡಿ ವ್ಯಾಪರಸ್ಥರು ತಮ್ಮ ಮಳಿಗೆಯನ್ನು ಯಾವುದೇ ಪೂರ್ವ ಸೂಚನೆ ನೀಡದೆ ತೆರವುಗೊಳಿಸಿದ ಬಗ್ಗೆ ನಗರ ಪಂಚಾಯತ್ ಮುಂಭಾಗದಲ್ಲಿ ಧರಣಿ‌ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಬಳಿಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತುಕತೆ ನಡೆಸಿ ಸದ್ಯಕ್ಕೆ ರಾತ್ರಿ ಯಾರೂ ಸಾಮಾನುಗಳನ್ನು ಅಲ್ಲಿ ಇಡದೇ ನಿಯಮಾನುಸಾರ ವ್ಯಾಪಾರ ನಡೆಸಲು ಅವಕಾಶ ನೀಡುವ ಮಾತುಕತೆಯೊಂದಿಗೆ ಪ್ರತಿಭಟನೆ ಕೈ ಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.