ಮುಂಡಾಜೆ ಮೃತ್ಯುಂಜಯ ನದಿಯಲ್ಲಿ ಅವ್ಯಾಹತ ಮರಳುದಂಧೆ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ ಪಂಚಾಯತ್ ವ್ಯಾಪ್ತಿಯ ಮೃತ್ಯುಂಜಯ ನದಿ ಹಳ್ಳದಲ್ಲಿ ರಾತ್ರಿ ವೇಳೆ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಲ್ಲಿ ತಾಲೂಕಿನ ದೊಡ್ಡ ಕುಳಗಳು ಭಾಗಿಯಾಗಿದ್ದು ರಾತ್ರಿ ಬೆಳಗ್ಗಿನವರೆಗೆ ಹಿಟಾಚಿ ಬಳಸಿ ಅಕ್ರಮ ಎಸಗುತ್ತಿದ್ದು, ಪಂಚಾಯತ್ ವ್ಯಾಪ್ತಿಯ ರಸ್ತೆ, ಮೋರಿಗಳಿಗೂ ಇದರಿಂದ ಹಾನಿಯಾಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಗ್ರಾಮಸ್ತರು ಒಟ್ಟು ಸೇರಿ ಇದನ್ನು ತಡೆಯುವ ಕೆಲಸ ಮಾಡಿದ್ದು ಆ ಬಳಿಕವೂ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನೂ ಹೀಗೆ ಮುಂದುವರಿದರೆ ಈ ಪ್ರದೇಶದಲ್ಲಿ ಧರಣಿ ನಡೆಸಿ ಉಘ್ರ ಹೋರಾಟ ನಡೆಸಲಿದ್ದೇವೆ ಎಂದು ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದ್ದಾರೆ.

ಘಟನೆ ಬಗ್ಗೆ ಶನಿವಾರ ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ, ಸದಸ್ಯರಾದ ನಾರಾಯಣ ಗೌಡ ದೇವಸ್ಯ, ಸುಮನಾ ಗೋಖಲೆ, ಮಾಜಿ ಸದಸ್ಯ ನಾಗರಾಜ ನಾಯ್ಕ, ಪ್ರಮುಖರಾದ ರಾಮಆಚಾರಿ ಮತ್ತು ನಾಮದೇವ ರಾವ್, ಗುರುರಾಜ್, ರಂಜನ್ ಇವರನ್ನೊಳಗೊಂಡ ನಿಯೋಗದೊಂದಿಗೆ ತಹಶಿಲ್ದಾರರನ್ನು ಭೇಟಿ ಮಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು ಈ ವಿಚಾರದ ಬಗ್ಗೆ ತಹಶಿಲ್ದಾರರ ಗಮನ ಸೆಳೆದರು.

ಈ ಬಗ್ಗೆ ವಸಂತ ಬಂಗೇರರ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ವಸಂತ ಬಂಗೇರ ಮತ್ತು ರಂಜನ್ ಗೌಡ ಅವರು, ಕಳೆದ ವರ್ಷ ನೆರೆ ಬಂದ ಸಂದರ್ಭ ತೋಟದೊಳಗೆ ನುಗ್ಗಿದ್ದ ಮರಳನ್ನು ತೆರವುಗೊಳಿಸಲು ಹಿಂದೆ ಇದ್ದ ಅನುಮತಿಯನ್ನು ದರ್ಬಳಿಸಿಕೊಂಡು ತಾಲೂಕಿನ ಲೂಟಿಕೋರರು ತಾಲೂಕಿನ ಸಂಪತ್ತನ್ನು ದೋಚುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರರು 2 ಬಾರಿ ಭೇಟಿ ನೀಡಿದ್ದರೂ ದಂಧೆಕೋರರು ತಪ್ಪಿಸಿಕೊಂಡಿದ್ದು ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ದಾಳಿ ಮಾಡಿ ಸ್ಥಳದಿಂದ 17 ಲೋಡು ಮರಳು ಮುಟ್ಟುಗೋಲು ಹಾಕಿಕೊಂಡು ಅದನ್ನು ನಿಯಮಾನುಸಾರ ವಿಲೇ ಮಾಡಿದ್ದಾರೆ ಎಂದರು.

ಈ ದಂಧೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಶಾಮೀಲಾತಿ ಎದ್ದುಕಾಣುತ್ತಿದ್ದು, ಇದೇ ರೀತಿ ತಾಲೂಕಿನ ಇತರ ಕಡೆಗಳಲ್ಲೂ ಕೂಡ ದಂಧೆ ನಡೆಯುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ವಸಂತ ಬಂಗೇರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.