ಬೆಳ್ತಂಗಡಿ ಕಸಬಾದ ಶ್ರೀ ಮಂಜುನಾಥೇಶ್ವರ ಕಲಾಭವನ ಸಮಾಜ ಮಂದಿರದಲ್ಲಿ ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಮತ್ತು ಕೇರಳದ 17 ಮಂದಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನಗರ ವ್ಯಾಪ್ತಿಯ ಬೆಳ್ತಂಗಡಿ ಕಸಬಾದ ಶ್ರೀ ಮಂಜುನಾಥೇಶ್ವರ ಕಲಾಭವನ ಸಮಾಜ ಮಂದಿರದಲ್ಲಿ ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಮತ್ತು ಕೇರಳದ ಒಟ್ಟು17 ಮಂದಿ ಕಾರ್ಮಿಕರು ಕೋರೋನದ ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿದ್ದರು.
ಇದನ್ನರಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ಅವರು 17 ಜನರಿಗೂ ಕೂಡ ಆಹಾರದ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಿದರು.

ಈ ಸಂದರ್ಭ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕೆ ಶೈಲೇಶ್ ಕುಮಾರ್ ಆಹಾರ ಕಿಟ್ ವಿತರಣೆ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.