ದ.ಕ ಜಿಲ್ಲೆಯಲ್ಲಿ ಇಂದು ಮೂರು ಮಂದಿಗೆ ಕೊರೋನಾ ದೃಢ

ಬೆಳ್ತಂಗಡಿ: ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ಇಂದು ಒಟ್ಟು ಮೂರು ಕೋವಿಡ್ 19 ಸೊಂಕಿತ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಂಟ್ವಾಳ ಪೇಟೆ ನಿವಾಸಿಗಳಾಗಿರುವ ಇವರು ಒಂದೇ ಮನೆಯವರಾಗಿದ್ದಾರೆ.


ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ನಿಗೆ ಸೋಂಕು ದೃಡ.69 ವೃದ್ದ ಗಂಡಿಸಿನ ಸಂಪರ್ಕ ದಿಂದ ಮೂವರಿಗೆ ಸೊಂಕು ಹರಡಿರುವ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಡಳಿತ.69 ವರ್ಷ ದ P-578 ವೃದ್ದನ ಮನೆಯವರಿಗೆ ಸೋಂಕು ದೃಡವಾಗಿದೆ.69 ವರ್ಷದ ಗಂಡಸು ವೃದ್ದರನ್ನು ಕಳೆದ ವಾರ ಕೊರೊನಾ ಪಾಸಿಟಿವ್ ದೃಡಗೊಂಡ ಬಳಿಕ ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಗಾಗಿ ದಾಖಲು ಮಾಡಲಾಗಿದೆ.
ಇವರು ಆರಂಭದಲ್ಲಿ ಮೃತಪಟ್ಟ ಮಹಿಳೆಯ ನೆರೆಮನೆಯವರಾಗಿದ್ದು ಇವರ ಸಂಬಂಧಿಕರು ಕೂಡಾ ಹೌದು.

ಇವರಿಗೆ ಕೋವಿಡ್ 19 ಸೊಂಕು ದೃಢವಾದ ಬಳಿಕ ಮನೆಯಲ್ಲಿದ್ದ ಸುಮಾರು 8 ಜನರನ್ನು ಮಂಗಳೂರು ಎನ್ .ಐ.ಟಿ.ಕೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.ಮಂಗಳೂರು ಕ್ವಾರಂಟೈನ್ ನಲ್ಲಿದ್ದ ಮೂವರಿಗೆ ಇಂದು ಕೊರೊನಾ ಪಾಸಿಟಿವ್ ಎಂದು ದೃಡವಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.