ಲಾಕ್‍ಡೌನ್ ಕೊಂಚ ಸಡಿಲಿಕೆಯಾದರೂ ಧರ್ಮಸ್ಥಳದಲ್ಲಿ ಆರಂಭವಾಗದ ಆರ್ಥಿಕ ಚಟುವಟಿಕೆ

  • ಇನ್ನೂ ಬಾಗಿಲು ತೆರೆಯದ ಅಂಗಡಿಗಳ ವ್ಯಾಪಾರಿಗಳು

ಧರ್ಮಸ್ಥಳ: ಕೊರೊನಾ ವೈರಸ್ ಹರಡದಂತೆ ದೇಶದಲ್ಲಿ 40ದಿನಗಳ ನಿರಂತರ ಲಾಕ್‍ಡೌನ್ ಘೋಷಿಸಿದ ಬಳಿಕ ಮೇ4ರಿಂದ ಲಾಕ್‍ಡೌನ್ ನಿಯಮವನ್ನು ಕೊಂಚ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಕೆಲವು ನಿರ್ಬಂಧಗಳಿಗೆ ವಿನಾಯಿತಿ ನೀಡಿದ್ದರೂ ದೇಶ ಹಾಗೂ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ನೇತ್ರಾವತಿ ಸ್ನಾನಘಟ್ಟದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ಚುರುಕಾಗಿಲ್ಲ ಮತ್ತು ಅಂಗಡಿಗಳ ಬಾಗಿಲು ಇನ್ನು ತೆರೆದಿಲ್ಲ.

ಧರ್ಮಸ್ಥಳದಲ್ಲಿ ಸಾರಿಗೆ ಸಂಚಾರ ಆರಂಭವಾಗದ್ದರಿಂದ ಜನರ ಸಂಚಾರವು ಬಹಳ ವಿರಳವಾಗಿದೆ. ವ್ಯಾಪಾರಕ್ಕಾಗಿ ಅಂಗಡಿಗಳು ತೆರೆಯದ್ದರಿಂದ ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡಿಲ್ಲ. ಧರ್ಮಸ್ಥಳಕ್ಕೆ ಅಂತರ್‍ಜಿಲ್ಲೆ ಹಾಗೂ ಅಂತರ್‍ರಾಜ್ಯದಿಂದ ಭಕ್ತರು ಇಲ್ಲಿಗೆ ಆಗಮಿಸಲು ನಿರ್ಬಂಧ ಹಾಗೂ ದೇವಾಲಯದಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲದ್ದರಿಂದ ಯಥಾಸ್ಥಿತಿಯ ಲಾಕ್‍ಡೌನ್ ಮುಂದುವರಿದ ಹಾಗೆಯೇ ಗೋಚರಿಸುತ್ತಿದೆ. ಧರ್ಮಸ್ಥಳದಲ್ಲಿ ಸ್ಥಳೀಯರ ಸಂಚಾರ ಮಾತ್ರವೇ ಕಾಣಲು ಸಿಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.