ಅರಸಿನಮಕ್ಕಿ ಜನರ ಬೇಡಿಕೆ : ಈಡೇರಿಸಿದ ಶಾಸಕ ಹರೀಶ್ ಪೂಂಜ

➡️  ಸಮರೋಪಾದಿಯಲ್ಲಿ ಸಾಗುತ್ತಿದೆ ಸುಸಜ್ಜಿತ ಅರಸಿನಮಕ್ಕಿ – ಕಾಪಿನಬಾಗಿಲು ರಸ್ತೆ ಕಾಮಗಾರಿ..
➡️ ಅರಸಿನಮಕ್ಕಿಯಲ್ಲಿ ಕಪಿಲಾ ನದಿಗೆ ನಿರ್ಮಾಣವಾಗಲಿದೆ ಹೊಸ ಸೇತುವೆ

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಅರಸಿನಮಕ್ಕಿಯ ಬಿಜೆಪಿ ಕಾರ್ಯಕರ್ತರಿಗೆ ಮಾಡಿರುವ ವಾಗ್ದಾನವನ್ನು ಶಾಸಕ ಹರೀಶ್ ಪೂಂಜರವರು ಹಂತ ಹಂತವಾಗಿ ಈಡೇರಿಸುತ್ತಿದ್ದಾರೆ ಎಂದು ಬಿಜೆಪಿ ಗ್ರಾಮ ಸಮಿತಿ ತಿಳಿಸಿದೆ.
ಇದೀಗ ಸುಸಜ್ಜಿತ ರಸ್ತೆ ಹಾಗೂ ಬೃಹತ್ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಕಾಪಿನಬಾಗಿಲು-ಅರಸಿನಮಕ್ಕಿ ರಸ್ತೆಯನ್ನು ಸುಮಾರು ರೂ. 12 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಕಾಮಗಾರಿ ಅಂತಿಮ ಘಟ್ಟ ತಲುಪಿದೆ. ಈ ರಸ್ತೆ ನಿರ್ಮಾಣದಿಂದ ಅರಸಿನಮಕ್ಕಿಯ ಚಿತ್ರಣವೇ ಬದಲಾಗಿರುವುದು ಸುಳ್ಳಲ್ಲ.
ಹೊಸ ಸೇತುವೆ ನಿರ್ಮಾಣ:


ಅರಸಿನಮಕ್ಕಿಯಲ್ಲಿ ಕಪಿಲಾ ನದಿಗೆ ಈಗಿರುವ ಸೇತುವೆ ಸುಮಾರು 55 ವರ್ಷಕ್ಕೂ ಹಳೆಯದು. ಇದರ ಅಭಿವೃದ್ಧಿಗೆ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಿದ್ದರು. “ನಿಮಗೆ ರಸ್ತೆಯ ಜೊತೆಗೆ ಹೊಸ ಸೇತುವೆ ಮಾಡಿಸಿಕೊಡುವುದಾಗಿ ಶಾಸಕರು ನೀಡಿದ ಭರವಸೆ ಈಡೇರುತ್ತಿದೆ.
ಇಂದು ಹೊಸ ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿ ಕಾಮಗಾರಿಗಳು ಆರಂಭಗೊಂಡಿವೆ.
ಬಿಜೆಪಿಯ ಸ್ಥಳೀಯ ಮುಖಂಡರುಗಳಾದ ಉದ್ಯಮಿ ಪ್ರಗತಿಪರ ಕೃಷಿಕ ಸುಧೀರ್ ಕುಮಾರ್ ಅಡ್ಕಾರಿ, ಜಯಪ್ರಸಾದ್ ಶೆಟ್ಟಿಗಾರ್, ಗಣೇಶ್ ಹೊಸ್ತೋಟ, ಮುರಳಿಧರ ಶೆಟ್ಟಿಗಾರ್, ನವೀನ್ ರೈ ಗೋಳಿತ್ತಡಿ, ನಾರಾಯಣ ಅಭ್ಯಂಕರ್, ಗಣೇಶ್ ಪಲಸ್ತಡ್ಕ, ವಿಲಾಸ್ ಖಾಡಿಲ್ಕರ್ ಮೊದಲಾದವರು ಗ್ರಾಮದ ಬೇಡಿಕೆ ಬಗ್ಗೆ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದರು. ಗುತ್ತಿಗೆದಾರರಾದ ಮುಗ್ರೋಡಿ ಕನ್ ಸ್ಟ್ರಕ್ಷನ್ ನ ಸುಧಾಕರ ಶೆಟ್ಟಿ, ಇಂಜಿನಿಯರ್ ಉದಯ ಕುಮಾರ್, ಸೈಟ್ ಇನ್ ಚಾರ್ಜ್ ಉದಯ ಇವರ ಉಸ್ತುವಾರಿಯಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.