ಶಿಬಾಜೆಯಲ್ಲಿ ಬಿರುಗಾಳಿ ಮಳೆ: ಅಪಾರ ಪ್ರಮಾಣದ ಕೃಷಿ-ಸೋತ್ತುಗಳಿಗೆ ಹಾನಿ

Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ : ಮೇ.5ರ ಮಂಗಳವಾರ ಸಂಜೆ ಬಿರುಗಾಳಿ ಮಳೆಗೆ ಮೊಂಟೆತಡ್ಕ ದೇವಸ್ಥಾನದ ಸಮೀಪದ ಸಾರ್ವಜನಿಕ ಬಸ್ ನಿಲ್ದಾಣದ ಮೇಲೆ ಮರ ಧರೆಗುರುಳಿ ಸಂಪೂರ್ಣ ಜಖಂಗೊಂಡಿದೆ.

ಶಿಬಾಜೆಯ ಪೆರ್ಲ ಎಂಬಲ್ಲಿ ರಸ್ತೆ ಗೆ ಅಡ್ಡಲಾಗಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.ಬೈಕರ ಬಿಜು ಎಂಬವರ ಮನೆಯ ಮೇಲ್ಚಾವಣಿ ರಭಸದ ಗಾಳಿಗೆ ನೆಲಕಚ್ಚಿದೆ.ಕೂಲಿ ಕಾರ್ಮಿಕರಾಗಿರುವ ಬಿಜು ಅವರ ಕುಟುಂಬ ಈ ಘಟನೆಯಿಂದ ಆಘಾತಕೊಳಗಾಗಿದ್ದಾರೆ.

ಶಿಬಾಜೆ ಗ್ರಾಮದ ಹಲವಾರು ಕೃಷಿ ಭೂಮಿಯ ಅಡಿಕೆ ರಬ್ಬರ್ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಕಳೆದೆರಡು ದಿನದಿಂದ ಇಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.