ಎಲ್‌ಐಸಿ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ರೂ. 6.36 ಕೋಟಿ ವ್ಯವಹಾರ

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ 2019-20ನೇ ಸಾಲಿನಲ್ಲಿ 4630 ಹೊಸ ಪಾಲಿಸಿಗಳೊಂದಿಗೆ ರೂ.3.49 ಕೋಟಿ ಸಿಂಗಲ್ ಪ್ರೀಮಿಯಮ್ ಮತ್ತು ರೂ. 2.87 ಕೋಟಿ ನಾನ್ ಸಿಂಗಲ್ ಪ್ರೀಮಿಯಮ್‌ನೊಂದಿಗೆ ಒಟ್ಟು ರೂ. 6.36 ಕೋಟಿ ಸಂಗ್ರಹವಾಗಿರುತ್ತದೆ.

ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಅಧಿಕಾರಿ ಎಂ.ವಿ. ಶೆಟ್ಟಿ ಬಳಗದವರಿಂದ 1351 ಪಾಲಿಸಿಗಳೊಂದಿಗೆ ರೂ. 1.36 ಕೋಟಿ, ಎ. ಜಯದೇವ್ ಬಳಗದವರಿಂದ 1057 ಪಾಲಿಸಿಗಳೊಂದಿಗೆ ರೂ. 1.99 ಕೋಟಿ ಟಿ.ಡಿ ರಾಘವೇಂದ್ರ ಬಳಗದವರಿಂದ 936 ಪಾಲಿಸಿಗಳೊಂದಿಗೆ ರೂ. 66.94 ಲಕ್ಷ, ಉದಯ ಶಂಕರ್ ಬಳಗದವರಿಂದ 524 ಪಾಲಿಸಿಗಳೊಂದಿಗೆ ರೂ. 66.54 ಪ್ರೀಮಿಯಮ್ ಸಂಗ್ರಹದೊಂದಿಗೆ ಹೊಸ ವ್ಯವಹಾರ ದಾಖಲಿಸಿದ್ದಾರೆ.

ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ 7 ಮಂದಿ ಪ್ರತಿನಿಧಿಗಳು ಶತಕ ವೀರರಾಗಿ ಹೊರಹೊಮ್ಮಿ ಸಾಧನೆಗೈದಿದ್ದಾರೆ. ಶತಕ ವೀರ ಪ್ರತಿನಿಧಿಗಳಾದ ಆಶಾ ಡಿ’ಸೋಜಾ (171), ಪುಷ್ಪರಾಜ್ ಹೆಗ್ಡೆ (165) ಜೆರಾಲ್ಡ್ ಕೊರೆಯಾ (148) ಕೆ. ರಮೇಶ ಬಂಗೇರ (130) ರಾಜೇಶ್ ಕುಮಾರ್ (130) ಜಾನ್ ಓಸ್ವಾಲ್ಡ್ ಪಿಂಟೊ (122) ಎ.ಎಸ್. ಲೋಕೇಶ್ ಶೆಟ್ಟಿ (112)
ಪ್ರೀಮಿಯಂ ಆದಾಯದಲ್ಲಿ ಪ್ರತಿನಿಧಿಗಳಾದ ಗ್ರೇಸಿ ಸಿಂಧಿಯಾ ಡಿ’ಸೋಜಾ ರೂ. 40.33 ಲಕ್ಷ ಜಾನ್ ಓಸ್ವಾಲ್ಡ್ ಪಿಂಟೊ 33.08 ಜೆರಾಲ್ಡ್ ಕೊರೆಯಾ ರೂ. 25.36 ಲಕ್ಷ ಪ್ರೀಮಿಯಂ ಸಂಗ್ರಹದ ಸಾಧನೆ ಮೆರೆದಿದ್ದಾರೆ.

ಆರ್ಥಿಕ ವರ್ಷ ಪ್ರಾರಂಭದಲ್ಲಿ ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ತೊಂದರೆಯಾಗಿ ಹಾಗೂ ವರ್ಷದ ಕೊನೆಯಲ್ಲಿ ಕೋವಿಡ್ -19ನಿಂದ ಗ್ರಾಹಕರು ಸಂಕಷ್ಟದಲ್ಲಿದ್ದರೂ ಜೀವ ವಿಮಾ ವ್ಯವಹಾರದಲ್ಲಿ ದಾಖಲೆಯಲ್ಲಿ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.