HomePage_Banner_
HomePage_Banner_
HomePage_Banner_

ಪದ್ಮುಂಜ ದಲ್ಲಿ ಮತ್ತೊಮ್ಮೆ ಗಾಳಿ ಮಳೆ ಯ ಅಟ್ಟಹಾಸ ಹಲವಾರು ಮನೆಗಳಿಗೆ ಹಾನಿ ಯುವಕನಿಗೆ ಗಾಯ ಕ್ರಷಿಕರಿಗೆ ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ

Advt_NewsUnder_1

ಪದ್ಮುಂಜದಲ್ಲಿ ಮೇ.3 ರಂದು  ಸಂಜೆ ಬೀಸಿದ ಗಾಳಿ ಮಳೆ ಸಿಡಿಲು ಮಿಂಚಿನಿಂದ ಹಲವಾರು ಮನೆಗಳ ಹಂಚುಗಳು ಸಿಮೆಂಟ್ ಶೀಟ್ ಗಳು ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ ಪದ್ಮುಂಜದ ಪ್ರೇಮ ಎಂಬವರ ಮನೆಯ ಸಿಮೆಂಟ್ ಶೀಟ್ ಗಳು ಹಾರಿಹೋಗಿದ್ದು ಮನೆಯೊಳಗಿದ್ದ ಯುವಕನ ತಲೆಗೆ ಶೀಟ್ ಬಿದ್ದು ಗಾಯವಾಗಿದೆ.

ಮಲೆಂಗಾಲ್ ಜಮೀಲ ಎಂಬವರ ಮನೆಯ ಹಂಚುಗಳು ಸಿಮೆಂಟ್ ಶೀಟ್ ಗಳು ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.ನನ್ಯ ಅಬುಸಾಲಿ ಎಂಬವರ ಮನೆಯ ಸಿಮೆಂಟ್ ಶೀಟ್ ಪದ್ಮುಂಜ ವಿಧ್ಯಾರ್ಥಿನಿ ನಿಲಯದ ಛಾವನಿಯ ಸಿಮೆಂಟ್ ಶೀಟ್ ಗಳು ಹಾರಿಹೋಗಿದೆ. ಪುದ್ದೊಟ್ಟು ಎಂಬಲ್ಲಿ ಜಾನಕಿಯವರ ಮನೆ ಸೇರಿದಂತೆ ಹಲವಾರು ಮನೆಗಳಿಗೆ ಹಾನಿಯಾಗಿದೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿದ್ದು ಅಸ್ತವ್ಯಸ್ತಗೊಂಡಿದೆ. ಕ್ರಷಿಕರ ತೋಟಗಳಲ್ಲಿ ಲೆಕ್ಕವಿಲ್ಲದಷ್ಟು ಅಡಿಕೆ ಮರಗಳು ತುಂಡರಿಸಿ ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.