ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಹಾಗೂ ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ ಹೊಸ ಮಾರ್ಗಸೂಚಿ

Advt_NewsUnder_1
Advt_NewsUnder_1
Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಹಾಗೂ ಬೇರೆ ಜಿಲ್ಲೆಗೆ ಪ್ರಯಾಣಿಸುವವರಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ. ಇದರಂತೆ ಪ್ರಯಾಣಿಸುವವರು https://sevasindhu.karnataka.gov.in ಇಲ್ಲಿ ಲಾಗಿನ್ ಆಗಿ ತಮ್ಮ ಹೆಸರು ಹಾಗೂ ಇತರ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲದವರು ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳು, ಎಲ್ಲಾ ಪಟ್ಟಣ ಪಂಚಾಯತ್, ನಗರ ಸಭೆ, ಪುರರಸಭೆ ಕಚೇರಿಗಳು, ಎಲ್ಲಾ ತಾಲೂಕು ಕಚೇರಿಗಳು, ನಗರ ಪಾಲಿಕೆಯ ಎಲ್ಲಾ ವಲಯ ಕಚೇರಿಗಳು, ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ನಾಡಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಸ್ವೀಕೃತವಾದ ಅರ್ಜಿಗಳನ್ನು ರಾಜ್ಯಮಟ್ಟದಲ್ಲಿ ಪರಿಶೀಲನೆ ನಡೆಸಿ ಸ್ವೀಕರಿಸುವ ರಾಜ್ಯದ ಸಹಮತ ಇದ್ದಲ್ಲಿ ಮಾತ್ರ ಅನುಮೋದಿಸಲ್ಪಡುತ್ತದೆ. ಅನುಮೋದಿತ ಅರ್ಜಿದಾರರು ರಾಜ್ಯ ಸರ್ಕಾರದ ನೋಡೆಲ್ ಅಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗುವುದು.ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸತಕ್ಕದ್ದು.
ಪ್ರಯಾಣಪೂರ್ವದಲ್ಲಿ ವೈದ್ಯಕೀಯ ಸ್ಕ್ರೀನಿಂಗ್ ನಡೆಸಲಾಗುವುದು. ಅನುಮೋದಿತ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ದಾಖಲೆಗಳನ್ನು ಹೊಂದಿರಬೇಕು. ಈ ಬಗ್ಗೆ ಯಾವುದೇ ಸಲಹೆ ಸಂದೇಹಗಳಿದ್ದಲ್ಲಿ ಕಂಟ್ರೋಲ್ ರೂಂ ಟೋಲ್ ಫ್ರೀ ನಂ. 1077 ಅಥವಾ ವಾಟ್ಸಾಪ್ ನಂ.948390800 ಯನ್ನು ಸಂಪರ್ಕಿಸಬಹುದು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.
ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತುರ್ತು ಕಾರ್ಯಗಳಿಗೆ ಪ್ರಯಾಣಿಸಲು ಬಯಸುವ ಸಾರ್ವಜನಿಕರು https://bit.ly/dkdicepass ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ.

ಒಬ್ಬ ವ್ಯಕ್ತಿ ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಂದು ಬಾರಿ ಮಾತ್ರ ಅಂತರ್‌ಜಿಲ್ಲಾ ಪ್ರಯಾಣದ ಪಾಸನ್ನು ಪಡೆಯಬಹುದಾಗಿದೆ.
ಈ ಪ್ರಯಾಣದ ಪಾಸ್ ಏಕಮುಖವಾಗಿದ್ದು, ಈ ಪಾಸ್ ಮೂಲಕ ಮರುಪ್ರಯಾಣಕ್ಕೆ ಅವಕಾಶವಿರುವುದಿಲ್ಲ.
ಪಾಸ್‌ಗಾಗಿ ಅರ್ಜಿ ಸಲ್ಲಿಸುವಾಗ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಪಾಸ್‌ಗೆ ಸಂಬಂಧಿಸಿದ ಲಿಂಕ್ ಮೆಸೇಜ್ ಮೂಲಕ ಬರಲಿದ್ದು, ಈ ಲಿಂಕ್ ಕ್ಲಿಕ್ ಮಾಡಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ.
ಅಂತರ್‌ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರ ವಾಹನದ ಚಾಲಕರಿಗೆ ಪ್ರತಯೇಕ ಪಾಸ್ ದೊರೆಯಲಿದ್ದು, ಸದ್ರಿ ಪಾಸ್ ಮೂಲಕ ವಾಹನ ಚಾಲಕರು ಸಾರ್ವಜನಿಕರನ್ನು ತಲುಪಿಸಿ ಹಿಂತಿರುಗಲು ಅವಕಾಶವಿರುತ್ತದೆ.

ಹೊರ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಲಾಕ್‌ಡೌನ್ ಹಿನ್ನಲೆಯಲ್ಲಿ ಹಿಂತಿರುಗಲು ಸಾಧ್ಯವಾಗದಿರುವ ವ್ಯಕ್ತಿಗಳಿಗೆ ಮರಳಿ ತಮ್ಮ ಜಿಲ್ಲೆಗಳಿಗೆ ತೆರಳಲು ಸದ್ರಿ ಪಾಸ್ ಮೂಲಕ ಏಕಮುಖ ಪ್ರಯಾಣಕ್ಕೆ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.

https://bit.ly/dkdicepass

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.