ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಧರ್ಮಸ್ಥಳ: ಮೇ 4ರಿಂದ ಕರ್ನಾಟಕ ರಾಜ್ಯವನ್ನು ಮದ್ಯ ಮಾರಾಟಕ್ಕೆ ಮುಕ್ತಗೊಳಿಸುವ ಸರಕಾರದ ನಿರ್ಧಾರವನ್ನು ರಾಜ್ಯದ ಜನತೆ ಸ್ವಯಂ ಪ್ರೇರಿತವಾಗಿ ತಿರಸ್ಕರಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಕರೆ ನೀಡಿದೆ.

ರಾಜ್ಯದ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ವೇದಿಕೆಯ ಸದಸ್ಯರಿಗೆ ಕಳುಹಿಸಲಾಗಿರುವ ಸಂದೇಶದಲ್ಲಿ ಮದ್ಯ ಸೇವನೆಯನ್ನು ಪುನಃ ಪ್ರಾರಂಭಿಸಬಾರದೆಂದು ವಿನಂತಿ ಮಾಡಲಾಗಿದೆ.

ಈ ಕುರಿತು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ‌ರವರು, ಗ್ರಾಮಾಭಿವೃದ್ಧಿ ಯೋಜನೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿಗಳನ್ನು ಉಲ್ಲೇಖಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಮದ್ಯ ಮಾರಾಟದ ಸ್ಥಗಿತದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಲಾಗಿದೆ. ಕೋವಿಡ್ ಸಮಸ್ಯೆಯಿಂದ ಸರಕಾರವು ಲಾಕ್‌ಡೌನ್ ಘೋಷಣೆ ಮಾಡಿದ ನಂತರದ ೪೦ ದಿನಗಳಲ್ಲಿ ಮದ್ಯಸೇವನೆಯು ಕಡಿಮೆಯಾಗಿ ಶೇಕಡಾ 89 ಸಂಸಾರಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿರುತ್ತದೆ. ಮದ್ಯ ಸೇವನೆ ಮಾಡದೇ ಇರುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಉಳಿತಾಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ವೇದಿಕೆಯ ಗೌರವಾಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆಯವರು 40 ದಿನಗಳಿಂದ ಮದ್ಯ ಸೇವನೆಯನ್ನು ನಿಲ್ಲಿಸಿರುವ ಎಲ್ಲರೂ ಮದ್ಯಪಾನವನ್ನು ಶಾಶ್ವತವಾಗಿ ತ್ಯಜಿಸಬೇಕೆಂದು ಕರೆ ನೀಡಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಮದ್ಯ ನಿಷೇದದ ಘೋಷಣೆಯಾಗಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರಕಾರವು ಮದ್ಯದ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದರೂ, ಮದ್ಯಪಾನ ನಿಷೇದವನ್ನು ಜನತಾ ಚಳುವಳಿಯಾಗಿ ಮಾಡಿಕೊಂಡು ಯಾರೂ ಮದ್ಯದ ಅಂಗಡಿಯ ಬಳಿ ಸುಳಿಯ ಬಾರದೆಂದು ವೇದಿಕೆಯ ಅಧ್ಯಕ್ಷ ಶ್ರೀ ರಾಮಸ್ವಾಮಿಯವರು ಜನರನ್ನು ವಿನಂತಿಸಿದ್ದಾರೆ.

ಡಾ| ಎಲ್. ಎಚ್. ಮಂಜುನಾಥ್
ಧರ್ಮಸ್ಥಳ ಯೋಜನೆಯು ಪ್ರಾಯೋಜಿಸಿರುವ ಹೆಚ್ಚಿನ ಮಹಿಳಾ ಸಂಘದ ಸದಸ್ಯರು ಒಕ್ಕೊರಲ ಅಭಿಪ್ರಾಯ ಮದ್ಯ ಖರೀದಿಯನ್ನು
ಸ್ಥಗಿತಗೊಳಿಸಬೇಕೆಂಬುದೇ ಆಗಿದೆ. ಈ ನಿಟ್ಟಿನಲ್ಲಿ ಕುಟುಂಬ ಮಟ್ಟದಲ್ಲಿ ದೇವರ ಹೆಸರಿನಲ್ಲಿ ಮದ್ಯ ಖರೀದಿಸದಂತೆ ಸಂಕಲ್ಪ ಮಾಡಬೇಕೆಂದು ವೇದಿಕೆಯು ಕರೆ ಕೊಟ್ಟಿದೆ. ಈ ಕುರಿತು ಇಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ವೇದಿಕೆಯ ಅಧ್ಯಕ್ಷ ಶ್ರೀ ರಾಮಸ್ವಾಮಿ, ಕಾರ್ಯದರ್ಶಿ ಶ್ರೀ ವಿವೇಕ್ ಪಾಯಸ್, ಸಂಚಾಲಕ ಡಾ| ಎಲ್. ಎಚ್. ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.