ದ.ಕ ಜಿಲ್ಲೆಯಲ್ಲಿ ಮತ್ತೆರಡು ಮಂದಿಗೆ ಕೊರೋನ ದೃಢ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಆಗಿರುವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ. ಮಂಗಳೂರು ಬೋಳಾರು ನಿವಾಸಿಯೊಬ್ಬರಿಗೆ ಮತ್ತು ಬಂಟ್ವಾಳದ ವೃದ್ಧರೊಬ್ಬರಿಗೆ ವೈರಸ್ ತಗುಲಿದೆ.

ಶುಕ್ರವಾರ (ಮೇ 1) ಸಂಜೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್‍ನ ವರದಿಯಲ್ಲಿ ಎ.30ರಂದು ಪಾಸಿಟಿವ್ ಬಂದ ಮಂಗಳೂರಿನ ಬೋಳೂರು ನಿವಾಸಿಯಾದ ವೃದ್ಧೆಯ 62 ವರ್ಷದ ಪತಿಗೆ ಹಾಗೂ ಬಂಟ್ವಾಳ ಪೇಟೆಯ ನಿವಾಸಿ, ಎ.19ರಂದು ಕೊರೊನಾಕ್ಕೆ ಮೃತಪಟ್ಟ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯ ನಿವಾಸಿಯಾದ 69 ವರ್ಷದ ವೃದ್ಧರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಎ.19ರಿಂದ ಇವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇವರ ಜೊತೆ ಮನೆಯವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಮೇ1 ರಂದು ಇದರ ವರದಿ ಬಂದಿದ್ದು ಈ ಇಬ್ಬರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಯಾಗಿರುವ ವೆನ್ಲಾಕ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂಟ್ವಾಳ ಪೇಟೆಯಲ್ಲಿ ಒಂದೇ ಕಡೆಯಲ್ಲಿ ಈವರೆಗೆ ಒಟ್ಟು 5 ಪ್ರಕರಣಗಳು ದಾಖಲಾದಂತಾಗಿದೆ. ಅದರಲ್ಲಿ ಮೂವರು ಮೃತಪಟ್ಟಿದ್ದಾರೆ. ಈಗ ದಕ್ಷಿಣ ಕನ್ನಡದಲ್ಲಿ ಒಟ್ಟು ಸೋಂಕಿತರು 24 ಅದರಲ್ಲಿ 12 ಗುಣಮುಖರಾಗಿದ್ದು, 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 24 ಜನರಿಗೆ ಸೋಂಕು ತಗುಲಿದ್ದು ಧೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇದರಲ್ಲಿ 251 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 22 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಸೋಂಕಿತ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.