ಬೆಳ್ತಂಗಡಿ ರೋಟರಿ ಕ್ಲಬ್‍ನಿಂದ ಕಾರ್ಮಿಕರಿಗೆ ಹೊಸ ಬಟ್ಟೆ ಸೇರಿದಂತೆ ಆಹಾರ ಪದಾರ್ಥ ವಿತರಣೆ

ಬೆಳ್ತಂಗಡಿ: ಮೇ. 1 ಕಾರ್ಮಿಕ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ವಿನಾಯಕ ರೈಸ್ ಮಿಲ್‍ನಲ್ಲಿ ಕಾರ್ಮಿಕರಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಿನಾಯಕ ರೈಸ್ ನಲ್ಲಿನ ಸುಮಾರು 55 ಕಾರ್ಮಿಕರಿಗೆ ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾದ ರೋ.ಡಾ. ಶ್ರೀಹರಿ ,ಹಾಗೂ ಆನ್ ಸ್ವಾಗತ ಭಿಡೆಯವರು ಕೊವೀಡ್-19ರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಪರವಾಗಿ ಎಲ್ಲಾ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ವಾಶ್, ಹೊಸ ಬಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರೊ.ಜಯರಾಮ್, ರೊ. ನಾರಾಯಣ್ ಭಿಡೆ, ರೊ. ಯೋಗೀಶ್ ಭಿಡೆ ,ರೊ ಬಿ.ಕೆ.ಧನಂಜಯ ರಾವ್ ,ರೊ ಶ್ರೀಧರ್ ಕೆ.ವಿ, ವಿನಾಯಕ ರೈಸ್ ಮಿಲ್‍ನ ಮಾಲಕ ಚಂದ್ರಕಾಂತ್ ಕಾಮತ್, ಪ್ರೇಮಾ ಕಾಮತ್ ,ಆನ್ ಶೈಲಾ ಕಾಮತ್, ಹರಿಪ್ರಸಾದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.