ಕಿಡಿಗೇಡಿಗಳಿಂದ ಫಲ್ಗುಣಿ ನದಿಗೆ ವಿಷ: ಸಾವಿರಾರು ಮೀನುಗಳ ಮಾರಣ ಹೋಮ

  • ಶಾಸಕ ಹರೀಶ್ ಪೂಂಜ ಗಮನಕ್ಕೆ ತಂದ ಸ್ಥಳೀಯರು

ಬೆಳ್ತಂಗಡಿ: ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ಕಿಡಿಗೇಡಿಗಳು ಫಲ್ಗುಣಿ ನದಿಗೆ ವಿಷ ಹಾಕಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.

ನದಿಯ ದಡದಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿರುವುದರಿಂದ ಪರಿಸರದ ಸುತ್ತಮುತ್ತಲು ದುರ್ನಾತದಿಂದ ಕೂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ವಿಷಯುಕ್ತ ನದಿಯ ನೀರನ್ನು ಪ್ರಾಣಿ, ಪಕ್ಷಿಗಳು ಸೇವಿಸುವ ಕಾರಣದಿಂದ ಅವುಗಳ ಪ್ರಾಣಗಳಿಗೂ ಕಂಟಕ ಒದಗುವ ಸಾಧ್ಯತೆ ಇದೆ. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಹೋಗಿರುವ ವಿಷಯುಕ್ತ ಮೀನುಗಳನ್ನು ತಿನ್ನುವುದರಿಂದ ಆ ಪಕ್ಷಿಗಳಿಗೆ ತೊಂದರೆಯಾಗಲಿದೆ.

ಸ್ಥಳೀಯರ ಆಕ್ರೋಶ:
ಫಲ್ಗುಣಿ ನದಿಗೆ ವಿಷ ಹಾಕಿರುವ ಕಿಡಿಗೇಡಿಗಳ ಕೃತ್ಯವನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕು ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದುರ್ವರ್ತನೆ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಒಂದು ವೇಳೆ ಸೂಕ್ತ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ

ಸ್ಥಳೀಯರಿಂದ ಶಾಸಕರಿಗೆ ದೂರು:
ಈ ಕಿಡಿಗೇಡಿಗಳ ಕೃತ್ಯದ ಬಗ್ಗೆ ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದ ಸ್ಥಳೀಯರು ಸೂಕ್ತ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.