HomePage_Banner_
HomePage_Banner_

ಕೇಂದ್ರ ಆರೋಗ್ಯ ಸಚಿವಾಲಯದ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಆರೆಂಜ್ ಜೋನ್

ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಮಾತ್ರ ರೆಡ್ ಜೋನ್ !

ಕೋವಿಡ್-19 ಸೋಂಕಿನ ಪ್ರಕರಣಗಳನ್ನು ಆಧರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಆರೆಂಜ್ ಜೋನ್ ಆಗಿ ಗುರುತಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿರುವಂತೆ ದೇಶದ ಒಟ್ಟು 733 ಜಿಲ್ಲೆಗಳನ್ನ ಪುನರ್ ವರ್ಗೀಕರಣ ಮಾಡಿ ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್ ಎಂದು ವಿಭಾಗಿಸಿದೆ. ರೆಡ್ ಜೋನ್ ಪಟ್ಟಿಯಲ್ಲಿ ದೇಶಾದ್ಯಂತ 130 ಜಿಲ್ಲೆಗಳಲ್ಲಿ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಈ 3 ಜಿಲ್ಲೆಗಳು ಕೆಂಪು ವಲಯದಲ್ಲಿವೆ. ಇಲ್ಲಿ ಲಾಕ್‍ಡೌನ್ ವಿಸ್ತರಣೆಯಾಗುವುದು ಖಚಿತವಾಗಿರುವುದಲ್ಲದೇ, ಮತ್ತಷ್ಟು ಕಟ್ಟುನಿಟ್ಟಾಗಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಕಳೆದ ಬಾರಿ ದಕ್ಷಿಣ ಕನ್ನಡ ಸೇರಿ ಕೆಂಪು ಪಟ್ಟಿಯಲ್ಲಿದ್ದ 5 ಜಿಲ್ಲೆಗಳು ಆರೆಂಜ್ ಜೋನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರೆಡ್ ಜೋನ್‍ಗೆ ಬಂದಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಜೋನ್:
ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿ ಮಾಡಿ ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳಾಗಿ ಘೋಷಿಸಿತ್ತು. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿತ್ತು. ರಾಜ್ಯ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ಈ ಹಿಂದೆ ಆರೆಂಜ್ ಜೋನ್‍ನಲ್ಲಿದ್ದ ದ.ಕ. ಜಿಲ್ಲೆಯನ್ನು ರೆಡ್ ಜೋನ್‍ನಲ್ಲಿ ಸೇರಿಸಿತ್ತು. ಈಗ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಆರೆಂಜ್ ಜೋನ್‍ನಲ್ಲಿ ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೊನಾ ಸೋಂಕಿನಿಂದ ಒಬ್ಬ ಮಹಿಳೆ ಮೃತಪಟ್ಟು ಮತ್ತು ಇನ್ನೊಬ್ಬ ಮಹಿಳೆಯಲ್ಲಿ ಪಾಸಿಟಿವ್ ಕಂಡು ಬಂದರೂ ಕೂಡ ಜಿಲ್ಲೆಯ ಒಟ್ಟು ವರದಿ ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಪ್ರಕರಣ ಕಂಡು ಬಂದರೂ ಕೂಡ ಅದರಲ್ಲಿ 16 ಮಾತ್ರ ದ.ಕ.ಜಿಲ್ಲೆಯದ್ದಾಗಿದೆ. ಉಳಿದಂತೆ 4 ಕೇರಳ, 1 ಉಡುಪಿ ಮತ್ತು 1 ಭಟ್ಕಳದ ವ್ಯಕ್ತಿಗೆ ಸೋಂಕು ತಗುಲಿತ್ತು. ಈ ಆರು ವ್ಯಕ್ತಿಗಳಿಗೆ ಮಂಗಳೂರು ನಂಟು ಇದ್ದ ಕಾರಣ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತ್ತು. ಇದೀಗ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ 6 ಪ್ರಕರಣವನ್ನು ಪ್ರತ್ಯೇಕಿಸಲಾಗಿದೆ.

ಬೆಳಗಾವಿ, ಕಲಬುರಗಿ ರೆಡ್‍ಜೋನ್‍ನಲ್ಲಿ ಇಲ್ಲ!
ರಾಜ್ಯದ 13 ಜಿಲ್ಲೆಗಳು ಆರೆಂಜ್ ಜೋನ್‍ನಲ್ಲಿದ್ದು, 14 ಜಿಲ್ಲೆಗಳು ಹಸಿರು ವಲಯದಲ್ಲಿವೆ. ಆದರೆ, ಸತತ ಎರಡು ದಿನದಿಂದ ಪಾಸಿಟಿವ್ ಪ್ರಕರಣಗಳು ಕಾಣುತ್ತಿರುವ ದಾವಣಗೆರೆ ಜಿಲ್ಲೆಯೂ ಗ್ರೀನ್ ಜೋನ್‍ನಲ್ಲಿರುವುದು ಅಲ್ಲಿನ ಜನರಿಗೆ ಖುಷಿ ನೀಡಿದೆ. ಇನ್ನು, ಬೆಳಗಾವಿ ಮತ್ತು ಕಲಬುರಗಿಯಲ್ಲಿಯೂ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗಿದ್ದರೂ ಆ ಜಿಲ್ಲೆ ಗಳನ್ನು ರೆಡ್‍ಜೋನ್‍ಗೆ ಕೇಂದ್ರ ಏಕೆ ಸೇರಿಸಿಲ್ಲ ಎಂಬುದು ಮಾತ್ರ ನಿಗೂಢ.

ಆರೆಂಜ್ ಜೋನ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 207 ಜಿಲ್ಲೆಗಳಿಂದ 284ಕ್ಕೆ ಏರಿದೆ ಎಂದು ತಿಳಿಸಿದೆ. 28 ದಿನಗಳ ಬದಲಾಗಿ 21 ದಿನ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಾಣಿಸದಿದ್ದರೆ. ಆ ಜಿಲ್ಲೆಯನ್ನು ಗ್ರೀನ್ ಜೋನ್‍ಗೆ ಸೇರಿಸಲಾಗುವುದು ಎಂದು ಸರಕಾರ ಹೇಳಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.