ಖಾಸಗಿ ಬಸ್ಸು ಚಾಲಕ‌ ನಿರ್ವಾಹಕರಿಗೆ ಶಾಸಕ ಹರೀಶ್ ಪೂಂಜ ರಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ; ಕೊರೊನಾ ಲಾಕ್ ಡೌನ್ ನಿಂದಾಗಿ ನಲವತ್ತು ದಿನಗಳಿಂದ ಖಾಸಗಿ ಬಸ್ಸುಗಳ ಓಡಾಟವಿಲ್ಲದೆ ಅದರಲ್ಲೇ ವೃತ್ತಿ ಬದುಕು ಕಟ್ಟಿಕೊಂಡಿದ್ದ ಚಾಲಕ ನಿರ್ವಾಹಕರಿಗೆ ಸಂಕಷ್ಟ ಆಗಿರುವುದನ್ನು ಮನಗಂಡು ಶಾಸಕ ಹರೀಶ್ ಪೂಂಜ ಅವರು ಒಟ್ಟು 120 ಮಂದಿಗೆ ಶ್ರಮಿಕ ಸ್ಪಂದನ ಆಹಾರದ ಕಿಟ್ ಗಳನ್ನು ವಿತರಿಸಿದರು.

ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ಕೇಂದ್ರಿತ ವಾಗಿ ಸಂಚರಿಸುವ ಖಾಸಗಿ ಬಸ್ಸು ಚಾಲಕ‌ ಮತ್ತು ನಿರ್ವಾಹಕರಿಗೆ ಈ ಸೌಲಭ್ಯ ವಿತರಣೆ ನಡೆಯಿತು.

ಇವರ ಸಂಕಷ್ಟದ ಬಗ್ಗೆ ರಾಜಕೇಸರಿ ಸಂಘಟನೆ ಮನವಿಯ ಮೂಲಕ ಶಾಸಕರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಇದಕ್ಕೆ ಶಾಸಕರು ತಕ್ಷಣ ಸ್ಪಂದಿಸಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.