ಲಾಕ್ ಡೌನ್ ಸಮಯದಲ್ಲೂ ಮಾನವೀಯತೆ ಮೆರೆದ ಎಸ್ ಡಿ ಪಿ ಐ ಕಾರ್ಯಕರ್ತರು

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಬರಗುಡ್ಡೆ ನಿವಾಸಿ ರಮೇಶ್ (39ವ.) ನಾಲ್ಕು ತಿಂಗಳಿಂದ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಬಡತನ ಅಡ್ಡಿಯಾಗಿತ್ತು. ನಾಲ್ಕು ತಿಂಗಳಿಂದ ನಡೆಯಲಾಗದ ಪರಿಸ್ಥಿತಿಯಲ್ಲಿದ್ದ ರಮೇಶ್ ಖಾಸಗಿ ಕಾರ್ಯ ನಿರ್ವಹಿಸಲು ಕಷ್ಟಪಡುತ್ತಿದ್ದರು. 

ಮಾತ್ರವಲ್ಲದೆ ಕುಟುಂಬಕ್ಕೆ ಬೆನ್ನೆಲುಬಾಗಿದ್ದ ರಮೇಶ್ ರ ಆನಾರೋಗ್ಯ ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಯಿತು. ಸ್ಥಳೀಯರು ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸುತ್ತಿದ್ದರು. ಹತ್ತಿರದ ಹಲವರ ಸಹಾಯಯಾಚಿಸಿದರೂ ಯಾರೂ ಸ್ಪಂದಿಸದೆ ಇದ್ದಾಗ ದುಃಖದಲ್ಲಿದ್ದ ಕುಟುಂಬದ ವಿಷಯವನ್ನು ಅರಿತ SDPI ಕಾರ್ಯಕರ್ತರು ಮತ್ತು ಊರಿನ ಮುಸ್ಲಿಂ ಬಾಂಧವರು ಕೂಡಲೇ ಸ್ಪಂದಿಸಿದ್ದಾರೆ.

SDPI ಬೆಳ್ತಂಗಡಿ ಘಟಕದ ಆಂಬುಲೆನ್ಸ್ ನ್ನು ಕರೆಸಿದ SDPIಕಿಲ್ಲೂರು ಬ್ರಾಂಚ್ ಸಮಿತಿ ಸದಸ್ಯರು ಉಚಿತ ಸೇವೆಯ ಮೂಲಕ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸುವಲ್ಲಿ ಸಹಕರಿಸಿದ್ದಾರೆ.

ಜಾತಿ ಧರ್ಮದ ಹೆಸರಲ್ಲಿ ದ್ವೇಷ ಸಾರುವವರಿಗೆ ಇದರಿಂದ ಉತ್ತಮ ಸಂದೇಶ ರವಾನೆಯಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.

ಲಾಕ್ ಡೌನ್ ಸಂದರ್ಭದಲ್ಲೂ ಎಸ್ ಡಿ ಪಿ ಐ ಕಾರ್ಯಕರ್ತರ ಮತ್ತು ಮುಸ್ಲಿಂ ಬಾಂಧವರ ಮಾನವೀಯತೆಯ ಕ್ಷಿಪ್ರ ಸ್ಪಂದನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.