ಸರಕಾರಿ ಆಸ್ಪತ್ರೆಯ ಗುತ್ತಿಗೆ ಆಧಾರಿತ ಆರೋಗ್ಯ ಕಾರ್ಯಕರ್ತರಿಗೆ ರಾಜಕೇಸರಿಯಿಂದ ಆಹಾರ ಕಿಟ್ ಕೊಡುಗೆ

ಅಖಿಲ ಕರ್ನಾಟಕ ರಾಜಕೇಸರಿ, ರಾಜಕೇಸರಿ ದ.ಕ.ಜಿಲ್ಲೆ ಮತ್ತು ರಾಜಕೇಸರಿ ಬೆಳ್ತಂಗಡಿ ತಾಲೂಕು ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಸಿಬ್ಬಂದಿಗಳ ಪೈಕಿ ಬಾಕಿ ಉಳಿದಿದ್ದ 23 ಮಂದಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ, ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ.ಬೆಳ್ತಂಗಡಿ, ಗುತ್ತಿಗೆ ನೌಕರ ಸಂಘದ ತಾಲೂಕು ಸಂಚಾಲಕ ಅಜಯ್.ಕೆ.ಎ,  ರಾಜಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಜಿಲ್ಲಾ ಸಂಚಾಲಕ ಲೋಕೇಶ್ ಸಬರಬೈಲ್, ತಾಲೂಕು ಸಂಚಾಲಕ ಪ್ರವೀಣ್.M. ಕುಲಾಲ್, ಹುಣ್ಸೆಕಟ್ಟೆ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಶ್ರವಣ್ ಕುಮಾರ್, ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.