ಎಸ್. ಐ ಗಳ ವರ್ಗಾವಣೆ ಎಸ್.ಪಿ ಯಿಂದ ದಿಢೀರ್ ಆದೇಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಆಶ್ಚರ್ಯಕರ ಬೆಳವಣಿಗೆ ಯೊಂದರಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಅವರ ಸುಪರ್ದಿಗೆ ಬರುವ ಮೂರು ಠಾಣೆಗಳ ಎಸ್. ಐ ಗಳನ್ನು ದಿಢೀರ್ ವರ್ಗಾವಣೆ ಗೊಳಿಸಿ ಎಸ್.ಪಿ ಲಕ್ಷ್ಮೀ ಪ್ರಸಾದ್ ಐಪಿಎಸ್ ಅವರು ಆದೇಶ ಮಾಡಿದ್ದಾರೆ.

ಧರ್ಮಸ್ಥಳ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಓಡಿಯಪ್ಪ ಗೌಡ ಅವರನ್ನು ಪುಂಜಾಲಕಟ್ಟೆ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಗೊಳಿಸಲಾಗಿದೆ.
ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಇತ್ತೀಚೆಗೆ ವರ್ಗವಾಗಿ ಬಂದಿದ್ದ ಪವನ್ ನಾಯಕ್ ಅವರನ್ನು ವರ್ಗಾವಣೆ ಗೊಳಿಸಲಾಗಿದೆ.
ಸಂಚಾರ ಠಾಣೆಗೆ ಇದುವರೆಗೆ ಪುಂಜಾಲಕಟ್ಟೆ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಕುಮಾರ್ ಸಿ ಕಾಂಬ್ಲೆ ಅವರನ್ನು ವರ್ಗಾವಣೆ ಗೊಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.