ಅಂತಾರಾಷ್ಟ್ರೀಯ ನೃತ್ಯ ದಿನದಂದು ರೋಟರಿ ಕ್ಲಬ್‍ನಿಂದ ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಾಗ್ರಿ ಕಿಟ್‍ಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಡವರು ಅಗತ್ಯ ಸಾಮಾಗ್ರಿಗಳ ಖರೀದಿಸಲಾಗದೆ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಪ್ರಸಿದ್ಧ 10 ಯಕ್ಷಗಾನ ಕಲಾವಿದರಿಗೆ ಅಂತಾರಾಷ್ಟ್ರೀಯ ನ್ಯತ್ಯ ದಿನದಂದು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ 10 ಸಾವಿರ ರೂ.ಮೌಲ್ಯದ ಅಗತ್ಯ ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಲಾಯಿತು.

ಯಕ್ಷಗಾನ ಕಲಾವಿದರಿಗೆ ವಿತರಿಸಿದ ಆಹಾರದ ಕಿಟ್‍ಗಳ ಪ್ರಾಯೋಜಕತ್ವ ವನ್ನು ಬೆಂಗಳೂರಿನ ಶ್ರೀಮತಿ ಮತ್ತು ಅನೀಶ್, ರೋ ಕೆ.ಪಿ ಪ್ರಸಾದ್, ಬಿ.ಕೆ ಗೋಪಾಲ್ ರಾವ್ ಹಾಗೂ ಬಿ.ಕೆ ವಿಘ್ನೇಶ್ ಕುಮಾರ್ ಕಿಲ್ಲೂರುರವರು ಸಹಕರಿಸಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ರೋ. ಕೆ ಪಿ ಪ್ರಸಾದ್, ರೋ. ಪ್ರಕಾಶ್ ಪ್ರಭು ರೋ. ಶ್ರೀಧರ್ ಕೆ.ವಿ, ರೋ. ಶಶಿಕಾಂತ್ ಡೋಂಗ್ರೆ, ರೋ ಬಿ. ಕೆ ಧನಂಜಯ್ ರಾವ್, ರಾಜಶ್ರೀ, ಗಾಯತ್ರಿ ಶ್ರೀಧರ್ ಹಾಗೂ ವಿಷ್ಣುಮೂರ್ತಿ ಭಟ್ ಹಾಗೂ ಯಕ್ಷ ಭಾರತೀಯ ಪ್ರತಿನಿಧಿ ಮಹೇಶ್ ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.