ನಾರಾವಿಯ ಜನಸೇವಾ ಟ್ರಸ್ಟ್ ನಿಂದ 40 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್‍ಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಸಲು ಸಾಧ್ಯವಾಗದಿರುವ 40 ಬಡ ಕುಟುಂಬಗಳಿಗೆ ಊರ ಹಾಗೂ ಪರ ಊರ ದಾನಿಗಳ ನೆರವಿನಿಂದ ನಾರಾವಿಯ ಜನಸೇವಾ ಟ್ರಸ್ಟ್ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.

ನಾರಾವಿ ಶ್ರೀಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಅಗತ್ಯ ದಿನಸಿ ಸಾಮಾಗ್ರಿಗಳ ಕಿಟ್, ಎಲ್ಲಾ ಫಲಾನುಭವಿಗಳಿಗೆ ಮಾಸ್ಕ್ ಗಳು, ಅನಾರೋಗ್ಯ ಪೀಡಿತರಾದ 10 ಕುಟುಂಬಗಳಿಗೆ ಅಗತ್ಯ ಔಷಧಗಳ ಖರೀದಿಸಲು ಆರ್ಥಿಕ ಧನಸಹಾಯಗಳನ್ನು ವಿತರಿಸಲಾಯಿತು. ಜನಸೇವಾ ಟ್ರಸ್ಟ್ ಸಂಚಾಲಕರಾದ ಹೊಸ್ಮಾರಿನ ಖ್ಯಾತ ವೈದ್ಯ ಡಾ.ಪ್ರಸಾದ್.ಬಿ ಶೆಟ್ಟಿ ಅವರು ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅರಿವು ಮೂಡಿಸಿದರು.
ಅಗತ್ಯ ಆಹಾರ ಸಾಮಾಗ್ರಿ, ವೈದ್ಯಕೀಯ ವೆಚ್ಚಗಳಿಗೆ ಸಹಾಯ ನೀಡಿದ ನಾರಾವಿಯ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀಕೃಷ್ಣ ತಂತ್ರಿ, ಸಂಚಾಲಕರಾದ ಡಾ.ಪ್ರಸಾದ್ ಬಿ ಶೆಟ್ಟಿ, ಕಾರ್ಯದರ್ಶಿ ಉಮೇಶ್ ಮಾಪಾಲ್, ಪೆರಿಬೆಟ್ಟು ಗುತ್ತು ಮಾಂಟ್ರಾಡಿಯ ಧರಣೇಂದ್ರ ಜೈನ್, ನಾರಾವಿ ಗ್ರಾ.ಪಂ.ಸದಸ್ಯರಾದ ರಾಜವರ್ಮ ಜೈನ್, ನಾರಾವಿಯ ಉದ್ಯಮಿಗಳಾದ ಪಾಂಡುರಂಗ ಹೆಗ್ಡೆ, ಪ್ರಕಾಶ್ ಕಿಣಿ, ಪರಸ್ಪರ ಯುವಕ ಮಂಡಲ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಪಿಎಸಿಎಸ್ ಅಧ್ಯಕ್ಷ ಸುಧಾಕರ ಭಂಡಾರಿ, ಅರಸ್ ಕಟ್ಟೆಯ ಚೈತನ್ಯ ಕಾಂಪ್ಲೆಕ್ಸ್‍ನ ರೋಶನ್ ಹೆಗ್ಡೆ, ಭವಿತ್ ಜನರಲ್ ಸ್ಟೋರ್‍ನ ಉದಯ್, ಜೈನ್ ಸ್ಟೋರ್‍ನ ಜಗದೀಶ್ ಜೈನ್, ನಾರಾವಿಯ ಪುಷ್ಪ ಕೇಂದ್ರದ ಪ್ರಸಾದ್ ಪೂಜಾರಿ, ನಾರಾವಿ ಎಸ್‍ಸಿಡಿಸಿಸಿ ಬ್ಯಾಂಕಿನ ನಿಖಿಲ್ ಜೈನ್, ವಿನ್ಯಾಸ್ ಜೈನ್, ಇಂಜಿನಿಯರ್ ಸುಧಾಕರ್ ಹೆಗ್ಡೆ, ಹೊಸಬೆಟ್ಟಿನ ಸಮರ್ ಕುಮಾರ್ ಜೈನ್, ಫಣಿರಾಜ್ ಅರಸ್ ಕಟ್ಟೆ, ಕುತ್ಲೂರಿನ ಸವಿತಾ ಹೆಗ್ಡೆ ಭೂಮಿಕಾ, ಜಯಪ್ರಕಾಶ್ ಹೆಗ್ಡೆ ಅರಸ್ ಕಟ್ಟೆ, ರತ್ನಾಕರ್ ಶೆಟ್ಟಿ ಅರಸ್ ಕಟ್ಟೆ, ಕಾರ್ಕಳದ ಪ್ರಾಂಕಿ ಪ್ರಾನ್ಸಿ ಡಿಸೋಜಾ, ಕುದ್ಯಾಡಿ ರಾಜೇಂದ್ರ ಜೈನ್ ಪಿಲ್ಯ, ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಸಂದೀಪ್, ಹುಡೆಚ್ಚಾರು ಅರಸ್ ಕಟ್ಟೆ ಸುದರ್ಶನ್ ಆಚಾರ್ಯ, ಶಶಿಕಾಂತ್ ಜೈನ್ ವಾಮದಪದವು ಇವರಿಗೆ ಟ್ರಸ್ಟ್ ಧನ್ಯವಾದಗಳನ್ನು ಅರ್ಪಿಸಿದೆ.

ಈ ಸಂದರ್ಭದಲ್ಲಿ ಜನಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಅಕ್ಷಯ್ ಕುಮಾರ್ ಜೈನ್, ಕಾರ್ಯದರ್ಶಿ ಉಮೇಶ್ ಮಾಪಾಲ್ ಹಾಗೂ ಸದಸ್ಯರುಗಳಾದ ಉದಯ್ ಹೆಗ್ಡೆ, ಜಗದೀಶ್ ಜೈನ್ , ವಸಂತ್ ಸಾಲಿಯನ್, ವಸಂತ್ ಆಚಾರ್ಯ, ಅಭಿಜಿತ್ ಜೈನ್, ಅಶೋಕ್ ಜೈನ್, ಉಪನ್ಯಾಸಕ ಪದ್ಮಪ್ರಭ ಇಂದ್ರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.