ಖಾಸಗಿ ಬಸ್ಸು ಚಾಲಕ, ನಿರ್ವಾಹಕರಿಗೆ ಸರಕಾರದ ಸೌಲಭ್ಯ ಒದಗಿಸಿ ಕೊಡುವಂತೆ ರಾಜಕೇಸರಿ ಸಂಘಟನೆಯಿಂದ ಸರಕಾರಕ್ಕೆ ಮನವಿ

ಬೆಳ್ತಂಗಡಿ; ಲಾಕ್ ಡೌನ್ ನಿಂದಾಗಿ ದಿನ ಕೂಲಿ ಕಾರ್ಮಿಕರಾಗಿ ದುಡಿಯುವ ಖಾಸಗಿ ಬಸ್ಸ್ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೇ. 3 ರಂದು ಒಂದು ವೇಳೆ ಲಾಕ್ ಡೌನ್ ಮುಕ್ತವಾದರೂ ಬಸ್ ಸಂಚಾರ ಅಸಾಧ್ಯ. ದುಡಿದು ತಿನ್ನುವ ನಮ್ಮ‌ ನೌಕರರಿಗೆ ಇದರಿಂದ ತುಂಬಾ ಕಷ್ಟವಾಗಿದೆ.‌ಆದ್ದರಿಂದ ಸರಕಾರದಿಂದ‌ ನಮಗೆ ನೇರವಾಗಿ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು ಎಂದು ನೌಕರರ ಪರವಾಗಿ ರಾಜಕೇಸರಿ ಸಂಘಟನೆಯಿಂದ ಶಾಸಕ ಹರೀಶ್ ಪೂಂಜ ರಿಗೆ ಮನವಿ ಮಾಡಲಾಗಿದೆ.

ಅದರಲ್ಲಿ ಕೂಡ ಖಾಸಗಿ ಬಸ್ಸು ಚಾಲಕ, ನಿರ್ವಾಹಕರು ಸೌಲಭ್ಯಗಳಿಲ್ಲದೆ ತುಂಬಾನೆ ಕಷ್ಟದಲ್ಲಿದ್ದಾರೆ.
ಕೆಲವರು 5 ಸೆಂಟ್ಸ್, 3 ಸೆಂಟ್ಸ್ ಇರುವ ಅಥವಾ ಬಾಡಿಗೆ ರೂಮಿನಲ್ಲಿ ಇರುವವರಿಗೆ ಆರ್ಥಿಕ ಸಮಸ್ಯೆ ಇದೆ. ಬಸ್ಸ್ ಸಿಬ್ಬಂದಿಗಳು ಎಲ್ಲರೂ ಬಡವರೇ ಆಗಿರೂದರಿಂದ‌ ಬದುಕು ದುಸ್ತರವಾಗಿದೆ.
ನಿತ್ಯ ಡ್ಯೂಟಿ ಮಾಡಿ ಮನೆಗೆ ಬೇಕಾದ ಸಾಮಾನು ಕೊಂಡು ಹೋಗುವವರೇ ಹೆಚ್ಚಾಗಿ ಇರುವುದು. ಆದುದರಿಂದ ನಮ್ಮ ಸಂಕಷ್ಟವನ್ನು ಆಲಿಸಿ ನಮ್ಮ ಮಾಲಕರಿಗೆ ನಮ್ಮ ಕಷ್ಟವನ್ನು ಮನಗಾಣಿಸಿ ಸೂಕ್ತ ಪರಿಹಾರವನ್ನು ಸಿಗುವಂತೆ ಮಾಡಬೇಕು ಮತ್ತು ಸರಕಾರದಿಂದ ಸಿಗುವ ಕೆಲವು ಸೌಲಭ್ಯಗಳನ್ನು ದೊರಕಿಸಿಕೊಡಲು ತಾವು ಸರಕಾರದ‌ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಮನವಿಯಲ್ಲಿ ಭಿನ್ನವಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.