ಬೆಂಗಳೂರಿನಿಂದ ನೆರಿಯಕ್ಕೆ ಬಂದ ಯುವಕನಿಗೆ ಹೋಮ್ ಕ್ವಾರಂಟೈನ್

ಬೆಳ್ತಂಗಡಿ: ಬೆಂಗಳೂರಿನಿಂದ ಎ.24ರಂದು ರಾತ್ರಿ ನೆರಿಯ ಗ್ರಾಮದ ಜನತಾ ಕಾಲನಿಗೆ ಬಂದ 27 ವಷ೯ದ ಯುವಕನನ್ನು ಪತ್ತೆ ಹಚ್ಚಿದ ಗ್ರಾ.ಪಂ ಕಾಯ೯ಪಡೆ ಹಾಗೂ ಆರೋಗ್ಯ ಇಲಾಖೆ ಆತ ಸೇರಿದಂತೆ ಆ ಮನೆಯ 5 ಮಂದಿಯನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ಬೆಂಗಳೂರಿನಲ್ಲಿದ್ಧ ಈ ಯುವಕ ಕೊರೋನಾ ಲಾಕ್ ಡೌನ್ ಇರುವ ಈ ಸಂದಭ೯ದಲ್ಲಿ.ಊರಿಗೆ ಹೇಗೆ ಬಂದ ಎಂಬುದು ನಿಗೂಢವಾಗಿದೆ. ಈತ ಊರಿಗೆ ಬಂದಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಕಾಯ೯ಪಡೆ ಆತನ ಮನೆಗೆ ತೆರಳಿ ಆತ ಸೇರಿದಂತೆ ಮನೆಯ 5 ಮಂದಿಯನ್ನು ಹೋಮ್ ಕ್ವಾಲಂಟೈನ್ ಒಳಪಡಿಸಿ ಸೀಲ್ ಹಾಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.