ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮತ್ತೊಂದು ಕೊರೊನ ಪಾಸಿಟಿವ್

Advt_NewsUnder_1
Advt_NewsUnder_1
Advt_NewsUnder_1

ದ.ಕ‌.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ಮಹಿಳೆಯೊರ್ವರಿಗೆ ಇಂದು ಕೊರೊನ ಪಾಸಿಟಿವ್ ದೃಡಪಟ್ಟಿದೆ.

ಆ ಮೂಲಕ ಬಂಟ್ವಾಳ ಪೇಟೆಯಲ್ಲಿ ಒಟ್ಟು ನಾಲ್ಕು ಪಾಸಿಟಿವ್ ಪ್ರಕರಣ ಬಂದಂತಾಗಿದೆ.
ಕೊರೊನಾ ಪಾಸಿಟಿವ್ ನಿಂದ ಚಿಕಿತ್ಸೆ ಪಡೆದ ಬಳಿಕ ಮೃತಪಟ್ಟ ಮಹಿಳೆಯರ ಪಕ್ಕದ ಮನೆಯ ಮಹಿಳೆ ಇವರು ಎಂದು ತಿಳಿದು ಬಂದಿದೆ.
ಇಂದು ಕೊರಾನ ಪಾಸಿಟಿವ್ ದೃಡವಾದ ಮಹಿಳೆಯ ತಾಯಿ ಈಗಾಗಲೇ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆಯ ಗಂಡ ವಿದೇಶದಲ್ಲಿರುವುದರಿಂದ ಬಂಟ್ವಾಳ ಪೇಟೆಯಲ್ಲಿರುವ ತಾಯಿ ಮನೆಯಲ್ಲಿಯೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಾಯಿಗೆ ಕೊರೊನ ಪಾಸಿಟಿವ್ ದೃಡವಾದ ಕೂಡಲೇ ಮನೆಯ ಎಲ್ಲಾ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿತ್ತು.
ಇಂದು ಪಾಸಿಟಿವ್ ದೃಡವಾದ ಮಹಿಳೆ ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದರು ಎಂದು ತಿಳಿದು ಬಂದಿದೆ.   

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.