ಫಸ್ಟ್‌ನ್ಯೂರೊ ಆಸ್ಪತ್ರೆಗೆ ಸಂಪರ್ಕ ಹಿನ್ನೆಲೆ ಶಿರ್ಲಾಲಿನಲ್ಲಿ 4 ಕುಟುಂಬದ 21 ಮಂದಿ ಕ್ವಾರೆಂಟೈನ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಏ. 20 ರಂದು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಬೆಳ್ತಂಗಡಿ ಶಿರ್ಲಾಲಿನ ಮಜಲುಪಲ್ಕೆ ನಿವಾಸಿಯ ಅಕ್ಕಪಕ್ಕದ 4 ಕುಟುಂಬದ 21 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಹೋಮ್ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ಶಿರ್ಲಾಲಿನ ವ್ಯಕ್ತಿ ಬ್ರೈನ್ ಹೆಮರೇಜ್‌ಗೊಳಗಾಗಿ ಏ. 4 ರಂದು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಏ. 2೦ ರಂದು ಅವರು ಅಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. ಅವರ ಅಂತ್ಯ ಸಂಸ್ಕಾರ ಶಿರ್ಲಾಲಿನಲ್ಲಿ ಕೈಗೊಳ್ಳಲಾಗಿದೆ. ಆದರೆ ಇದೀಗ ಫಸ್ಟ್ ನ್ಯೂರೋ ಆಸ್ಪತ್ರೆಯ ಟ್ರಾವೆಲ್ ಲೀಸ್ಟ್ ಪ್ರಕಾರ ಇದೀಗ ಅಗತ್ಯ ಮುಂಜಾಗ್ರತಾ ಕ್ರಮದ ಭಾಗವಾಗಿ ಅವರ ಅಕ್ಕಪಕ್ಕದ ೪ ಕುಟುಂಬಗಳ ೨೧ ಮಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.
ಆ ಕುಟುಂಬದ ಮನೆಗಳಿಗೆ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರಾ, ವೇಣೂರು ಸಬ್ ಇನ್ಸ್‌ಪೆಕ್ಟರ್ ಲೋಲಾಕ್ಷ, ಶಿರ್ಲಾಲು ಗ್ರಾ.ಪಂ ಅಧ್ಯಕ್ಷ ಶಶಿಕಲಾ, ಪಿಡಿಒ ರಾಜು, ಹಿರಿಯ ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಬೀಟ್ ಪೊಲೀಸ್ ಅಭಿಜಿತ್ ಮತ್ತು ಪ್ರಶಾಂತ್ ಮೊದಲಾದವರು ಭೇಟಿ ನೀಡಿ ಅಗತ್ಯ ನಿರ್ದೇಶನ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.