23 ಸಾವಿರ ಮಂದಿ ಮೀನುಗಾರರ ರೂ.60 ಕೋಟಿ ಸಾಲಮನ್ನಾ: ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

  • ರಾಜ್ಯ ಹಣಕಾಸು ಇಲಾಖೆಯಿಂದ ಅಧಿಕೃತವಾಗಿ ಬಿಡುಗಡೆ

ಮಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿದ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಮಂದಿ ಫಲಾನುಭವಿಗಳಿಗೆ ರಾಜ್ಯ ಹಣಕಾಸು ಇಲಾಖೆಯು 60 ಕೋಟಿ ರೂಪಾಯಿಯನ್ನು ಅಧಿಕೃತವಾಗಿ ಎ.24ರಂದು ಬಿಡುಗಡೆ ಮಾಡಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

ಈ ಸಾಲಮನ್ನಾದ ಹಣ ಭೂಮಿಕೋಶದ ಮೂಲಕ ಸಾಲಗಾರರ ಖಾತೆಗೆ ಜಮಾ ಮಾಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಈ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್‍ನ ಸಂಕಷ್ಟದ ದಿನಗಳ ಸಂದರ್ಭದಲ್ಲಿಯೂ ಮೀನುಗಾರರ ಹಿತರಕ್ಷಣೆಗಾಗಿ 60 ಕೋಟಿ ರೂಪಾಯಿಯ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಇದಕ್ಕೆ ಸಹಕಾರ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದ ಸಮಸ್ತ ಮೀನುಗಾರರ ಪರವಾಗಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಧನ್ಯವಾದಗಳನ್ನು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.