ಶಿಶಿಲ ಗ್ರಾಮದ 25 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಶಿಶಿಲ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲಾಗದ 25 ಬಡ ಕುಟುಂಬಗಳಿಗೆ ನವಮಂಗಳೂರು ಬಂದರು ಮಂಡಳಿಯ ನಿವೃತ್ತ ಉದ್ಯೋಗಿ ರಾಜ್ ಕಿರಣ್ ಎ.ಎಸ್. ಹಾಗೂ ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಅವರ ಸಹಯೋಗದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಶಿಶಿಲ ಗ್ರಾಮದ ಅರ್ಹ ಬಡ ಕುಟುಂಬಗಳಿಗೆ ಅಗತ್ಯ ದಿನಬಳಕೆಯ ಸಾಮಾಗ್ರಿಗಳನ್ನು ನೀಡುವುದಕ್ಕಾಗಿ ರಾಜ್ ಕಿರಣ್ ತಮ್ಮ ನಿವೃತ್ತಿ ವೇತನದ 10 ಸಾವಿರ ರೂಪಾಯಿಗಳನ್ನು ವಿನಿಯೋಗಿಸಿದ್ದಾರೆ. ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ದಿನಬಳಕೆಯ ಹತ್ತು ವಸ್ತುಗಳ ಒಳಗೊಂಡ 25 ಕಿಟ್‍ಗಳನ್ನು ಆಯ್ದ ಕುಟುಂಬಗಳಿಗೆ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.