ಕಳೆಂಜ ಗ್ರಾ.ಪಂ.ವ್ಯಾಪ್ತಿಯ ಬರೆಂಗಾಯದ 30 ಕುಟುಂಬಗಳಿಗೆ ಆಹಾರ ಕಿಟ್‍ಗಳ ವಿತರಣೆ

ಕಳೆಂಜ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿರುವ ಕಳೆಂಜ ಗ್ರಾ.ಪಂ.ವ್ಯಾಪ್ತಿಯ ಬರೆಂಗಾಯ 5 ಸೆಂಟ್ಸ್ ಕಾಲೋನಿಯ 30 ಬಡ ಕುಟುಂಬಗಳಿಗೆ ಬರೆಂಗಾಯ ರಾಮಣ್ಣ ಗೌಡ, ಕೇಶಾವತಿ ದಂಪತಿ ಹಾಗೂ ಹೈವೇ ಪ್ಯಾಟ್ರೋಲ್ ಕಾರ್ಕಳ ಪೊಲೀಸ್ ಸಿಬ್ಬಂದಿ ಲಿಂಗಪ್ಪ ಗೌಡ, ಕುಕ್ಕುಂದೂರು ನಕ್ರೆಯ ಕಿರಿಯ ಆರೋಗ್ಯ ಸಹಾಯಕಿ ಕುಮುದಾವತಿ ದಂಪತಿ, ಸುದರ್ಶನ ಗೌಡ ಬರಂಗಾಯ ಸೇರಿ ದಿನ ಬಳಕೆಯ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ಫಲಾನುಭವಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಿಟ್ ಪಡೆದರು.
ಈ ಸಂದರ್ಭದಲ್ಲಿ ಕಳೆಂಜ ಗ್ರಾ.ಪಂ. ಸದಸ್ಯ ಕುಶಾಲಪ್ಪ ಗೌಡ ಕಜೆ, ನಿಡ್ಲೆ ಗ್ರಾ.ಪಂ. ಮಾಜಿ ಸದಸ್ಯ ಸುಂದರ ಗೌಡ, ಹರಿಶ್ಚಂದ್ರ ಆಚಾರ್ ಬರೆಂಗಾಯ, ಜಾನಕಿ ಬರಂಗಾಯ, ಗಾಯತ್ರಿ ಬರಂಗಾಯ ಮುಂತಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.