ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಶಾಸಕರುಗಳ ಮೇಲೆ ಕೇಸು ದಾಖಲಿಸಿ: ಎಂಎಲ್‍ಸಿ ಹರೀಶ್ ಕುಮಾರ್

ಬೆಳ್ತಂಗಡಿ: ಬಂಟ್ವಾಳದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರಕ್ಕೆ ಶಾಸಕರುಗಳಾದ ಡಾ| ಭರತ್ ಶೆಟ್ಟಿ ಮತ್ತು ಉಮಾನಾಥ ಕೋಟ್ಯಾನ್ ಅವರು ಮಧ್ಯರಾತ್ರಿ ತನಕ ಪ್ರತಿಭಟನೆಗೆ ಬೆಂಬಲಿಸಿರುವುದು ದುರದೃಷ್ಟಕರ ಹಾಗೂ ಖಂಡಿನೀಯ ಇದು ಕೋವಿಡ್ ವಿರೋಧಿ ಕೃತ್ಯ ಇವರನ್ನು ಕೂಡಲೇ ಸರಕಾರ ಬಂಧಿಸಬೇಕು. ಇವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ. 

ಶಾಸಕರುಗಳಿಬ್ಬರು ಮಾಡಿರುವುದು ಕೋವಿಡ್ ವಿರೋಧಿ ಕೆಲಸ. ಇದು ಬೆಂಗಳೂರಿನ ಪಾದರಾಯಣ ಪುರದಲ್ಲಿ ಮಾಡಿದಂದಕ್ಕಿಂತ ದೊಡ್ಡ ಅಕ್ಷಮ್ಯ ಅಪರಾಧ. ಇವರು ಮಾಡಿರುವುದು ಕೋವಿಡ್ ವಿರೋಧಿ ಕೃತ್ಯ. ಇವರ ಮೇಲೆ ಕೇಸು ಹಾಕಬೇಕು. ಜನರ ನೋವು-ನಲಿವು ಅರ್ಥ ಮಾಡಿಕೊಳ್ಳದ ಶಾಸಕರಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇಂದು ಕೃಷಿಕರು ಬಹಳಷ್ಟು ಸಮಸ್ಯೆಯಲ್ಲಿದ್ದು, ರಸಗೊಬ್ಬರಕ್ಕೆ ಕೊಟ್ಟ 22,500 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದಿದೆ. ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಪ್ರೋತ್ಸಾಹ ನೀಡುವ ಬದಲು ಸರಕಾರ ಸಬ್ಸಿಡಿಯನ್ನು ಕಟ್ ಮಾಡಿರುವುದು ದೊಡ್ಡ ತಪ್ಪು. ಸರಕಾರಿ ನೌಕರರ ತುಟ್ಟಿ ಭತ್ತೆ 37,530 ಕೋಟಿಯನ್ನು ಸರಕಾರ ರದ್ದು ಮಾಡಿದೆ. ಇದನ್ನು ಕೂಡಾ ಕೊಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಎಸ್.ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.