ರಾಜಕೇಸರಿ ಬಳಗದಿಂದ ಕೊರೊನಾ ವಾರಿಯರ್‍ಸ್ ಸರಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರಿಗೆ 60 ಕಿಟ್ಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ನಿಯಂತ್ರಣಕ್ಕಾಗಿ ಹೋರಾಡುತ್ತಿರುವವರ ಪೈಕಿ ಸರಕಾರದ ಯಾವುದೇ ಸೌಲಭ್ಯಗಳಿಲ್ಲದೆ ಎನ್.ಎಚ್.ಎಂ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಶ್ರಮವನ್ನು ವಿಶೇಷವಾಗಿ ಗುರುತಿಸಿದ ರಾಜಕೇಸರಿ ಕರ್ನಾಟಕ, ರಾಜಕೇಸರಿ ದ.ಕ ಜಿಲ್ಲೆ, ಮತ್ತು ರಾಜಕೇಸರಿ ಬೆಳ್ತಂಗಡಿ ವತಿಯಿಂದ 60 ಮಂದಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ಟ್‌ಗಳನ್ನು ನೀಡಲಾಯಿತು. ಪ್ರಧಾನ ಅತಿಥಿಯಾಗಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿಸ್ಟರ್ ಅಮ್ಮಿ ಇವರುಗಳು ಅತಿಥಿಗಳಾಗಿದ್ದು ಕಿಟ್ಟ್‌ಗಳನ್ನು ವಿತರಿಸಿದರು.

ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ, ಜಿಲ್ಲಾ ಗೌರವಾಧ್ಯಕ್ಷ ಅರ್ಪಣ್ ಶೆಟ್ಟಿ, ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಜಿಲ್ಲಾ ಸಂಚಾಲಕ ಲೋಕೇಶ್ ಸಬರಬೈಲು, ಬೆಳ್ತಂಗಡಿ ಅಧ್ಯಕ್ಷ ಪ್ರವೀಣ್ ಕುಲಾಲ್, ಉಜಿರೆ ಘಟಕದ ಪ್ರವೀಣ್ ಇವರುಗಳು ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಹರಿಣಿ, ಹಾಗೂ ಆಸ್ಪತ್ರೆಯಲ್ಲಿ ದಾದಿಯರಾಗಿ ಮತ್ತು ಆರೋಗ್ಯ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ನೌಕರರಿಗೆ ಕಿಟ್ಟ್‌ಗಳನ್ನು ಹಸ್ತಾಂತರಿಸಿದರು.

ರಾಜಕೇಸರಿ ಕಾರ್ಯಕರ್ತರಾದ ಪ್ರಸನ್ನ ಮೇಲಂಬೆಟ್ಟು, ಬೆಳ್ತಂಗಡಿಯ ಸಂಪತ್, ಅನಿಲ್, ಗಣೇಶ್, ಶ್ರವಣ್, ಸಂದೇಶ್, ಸುರೇಂದ್ರ ಕೋಟ್ಯಾನ್ ಮೊದಲಾದವರು ಭಾಗಿಯಾಗಿದ್ದರು.
ಗುತ್ತಿಗೆನೌಕರರ ಸಂಘದ ತಾಲೂಕು ಸಂಚಾಲಕ ಅಜಯ್ ಕೆ.ಎ ಕಲ್ಲೆಗ ರಾಜಕೇಸರಿ ಸಂಘಟನೆಯ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿ ವಂದನಾರ್ಪಣೆಗೈದರು.

ಸಮಾನ ದುಡಿಮೆಗೆ ಸಮಾನ ವೇತನ”, ಸೂಕ್ತ ಸೇವಾ ಭದ್ರತೆ ಬೇಡಿಕೆ ಮುಂದಿಟ್ಟು ಅನೇಕ ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಾ, ಮನವಿಗಳ ಮೂಲಕ ಸರಕಾರದ ಗಮನಸೆಳೆಯಲು ಯತ್ನಿಸುತ್ತಿರುವ ಎನ್.ಎಚ್.ಎಮ್ ಗುತ್ತಿಗೆ ನೌಕರರು ಸರಕಾರದ ಉದ್ಯೋಗಿಗಳಂತೆ ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ. ಜೊತೆಗೆ ಕೊರೊನಾ ನಿಯಂತ್ರಣದ ಈ ಯುದ್ಧದಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ಮಹತ್ವದ ಕಾರ್ಯವೆಸಗುತ್ತಿದ್ದು ಅವರ ಶ್ರಮವನ್ನು ಪ್ರತ್ಯೇಕವಾಗಿ ಗುರುತಿಸುವ ಕೆಲಸ ನಡೆಸುವ ಮೂಲಕ ರಾಜಕೇಸರಿ ಸಂಘಟನೆ ಅವರ ಶ್ರಮವನ್ನು ಪ್ರತ್ಯೇಕವಾಗಿ ಗುರುತಿಸಿ ಮಾದರಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.